ಭೂಮಿಯ ಮೇಲೆ ಶಾಂತಿ

Author : ಶ್ರೀಲತಾ ಎ

Pages 52

₹ 10.00




Year of Publication: 2013

Synopsys

ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮ ಇಡೀ ಜೀವಮಾನವನ್ನೇ ಮುಡಿಪಾಗಿಟ್ಟಿದ್ದ 23ನೆಯ ಪೋಪ್ ಜಾನ್ ಪಾಲ್ ಅವರು, ವಿಶ್ವದಲ್ಲಿ ಶಾಂತಿಗಾಗಿ ಎಲ್ಲಾ ಬಿಷಪ್‌ ಗಳಿಗೆ ಕಳುಹಿಸಿದ ಪ್ರಮುಖವಾದ ಲೇಖನಗಳನ್ನು ಈ ಕೃತಿಯಲ್ಲಿ ಕೊಡಲಾಗಿದೆ. ಈ ಲೇಖನದಲ್ಲಿ ಸತ್ಯ, ನ್ಯಾಯ, ಅನುಕಂಪ, ಸ್ವಾತಂತ್ರ್ಯ ಎಂಬ ನಾಲ್ಕು ತತ್ತ್ವಗಳ ಮೇಲೆ ಹೇಗೆ ವಿಶ್ವ ಶಾಂತಿಯನ್ನು ಸ್ಥಾಪಿಸಬಹುದು ಎಂಬ ವಿಷಯಗಳ ಕುರಿತ ವಿವರಣೆಗ ಳನ್ನು ಕಾಣಬಹುದಾಗಿದೆ. ವಿಶ್ವಶಾಂತಿಗೆ ಮಾನವ ಸಮಾಜದಲ್ಲಿನ ಸುವ್ಯವಸ್ಥೆಗಳು, ವ್ಯಕ್ತಿ ಮತ್ತು ಸಾರ್ವಜನಿಕ ಪ್ರಾಧಿಕಾರಗಳು, ಸರಕಾರಗಳ ನಡುವಿನ ಸಂಬಂಧಗಳು, ರಾಜಕೀಯ ಸಂಘಟನೆಗಳು, ವಿಶ್ವಸಂಸ್ಥೆಯ ಸಂಘಟನೆ ಇವೆಲ್ಲಾ ಹೇಗೆ ಪೂರಕವಾಗಿ ಕೆಲಸ ಮಾಡಬಹುದು ಎಂಬುದನ್ನು ಸರಳವಾಗಿ ಈ ಕೃತಿಯಲ್ಲಿ ವಿವರಣೆಗಳನ್ನು ನೀಡಲಾಗಿದೆ.

About the Author

ಶ್ರೀಲತಾ ಎ

ಶ್ರೀಲತಾ ಎ., ಎಂ.ಎ.(ಅರ್ಥಶಾಸ್ತ್ರ) ಎಂ.ಎ.(ಆಡಳಿತ), ಬಿ.ಇಡಿ ಪದವಿ ಪಡೆದು ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ಪದ್ಮನಾಭ ಆಚಾರ್ಯ, ತಾಯಿ ಇಂದಿರಾ. ರಕ್ತತರ್ಪಣ (2007), ಸಂವಹನ (2010)ಲಿ ಕವನ ಸಂಕಲನ ಪ್ರಕಟಿಸಿದ್ದಾರೆ. ಮರುಕಳಿಕೆ(2010) ಪಠ್ಯಪುಸ್ತಕ : Economic Development of India,   ಭಾಷಾಂತರ : Peace on the Earth John pope xiii (ಕನ್ನಡಕ್ಕೆ) ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷ್, ಕನ್ನಡ, ತುಳು ಭಾಷೆಗಳಲ್ಲಿ ಸಾಹಿತ್ಯ ರಚನೆ, ಹಿಂದೂಸ್ತಾನಿ ಸಂಗೀತದಲ್ಲಿ ವಿಶಾರದ ಪದವಿ, ಭಾರತ ಸೇವಾದಳದ ತರಬೇತಿ, ಸಿವಿಲಿಯನ್ ರೈಫಲ್ ಟ್ರೇನಿಂಗ್ ಕೋರ್ಸ್ (ಸಿ.ಆರ್.ಟಿ.ಸಿ.) ಕೊಳಚೆ ಪ್ರದೇಶದ ...

READ MORE

Related Books