ಡಾ. ಅಮೃತ ಸೋಮೇಶ್ವರ

Author : ನಾ. ದಾಮೋದರ ಶೆಟ್ಟಿ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ - ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹದಿಮೂರನೆಯ ಪುಸ್ತಕ ಹಿರಿಯ ಜಾನಪದ ವಿದ್ವಾಂಸ ಡಾ. ಅಮೃತ ಸೋಮೇಶ್ವರ. ಸೃಜನಶೀಲತೆ ಮತ್ತು ಸಂಶೋಧನಾ ಪ್ರಜ್ಞೆ ಎರಡನ್ನೂ ಜೊತೆಯಾಗಿ ಜಾನಪದ ಲೋಕಕ್ಕೆ ಧಾರೆ ಎರೆದ ಹಾಗೆ ಬದುಕುತ್ತಿರುವ ಡಾ. ಅಮೃತ ಸೋಮೇಶ್ವರ ಅವರು ನಾಡು ಕಂಡ ಅಪರೂಪದ ಜಾನಪದ ತಜ್ಞ ಅಷ್ಟೇ ಅಲ್ಲ, ಹಿರಿಯ ವಿದ್ವಾಂಸರೂ ಕೂಡಾ. ಕನ್ನಡ ಮತ್ತು ತುಳು ಭಾಷೆಯಲ್ಲಿ ಸುಮಾರು 80ರಷ್ಟು ಕೃತಿಗಳನ್ನು ರಚಿಸಿರುವ ಅವರ ಆಸಕ್ತಿ ಮತ್ತು ಅಭಿರುಚಿಗಳು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸಮಾನ. ಸಣ್ಣಕತೆ, ಕವಿತೆ, ವಿಮರ್ಶೆ, ಸಂಶೋಧನೆ, ನಾಟಕ, ಅನುವಾದ, ನೃತ್ಯರೂಪಕ, ಜಾನಪದ, ಸ್ವತಂತ್ರ ಗಾದೆಗಳು, ವಿನೋದಕೋಶ, ಶಬ್ದಕೋಶ, ಕಾದಂಬರಿ ಹೀಗೆ ಅವರ ಬರಹಗಳು ವೈವಿಧ್ಯಮಯ ಮತ್ತು ಜೀವನಾನುಭವಗಳಿಂದ ಸಮೃದ್ಧ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.  ಪಾರ್ತಿಸುಬ್ಬ, ಪೊಳಲಿ ಶೀನಪ್ಪ ಹೆಗ್ಡೆ, ಕು.ಶಿ. ಹರಿದಾಸ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಗುಂಡ್ಮಿ ಚಂದ್ರಶೇಖರ ಐತಾಳ, ಕುಕ್ಕಿಲ, ಕರ್ಕಿ, ಕೊ.ಅ. ಉಡುಪ ಹೆಸರಿನ ಪ್ರಶಸ್ತಿಗಳ ಜೊತೆ, ಜಾನಪದ ತಜ್ಞ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ತುಳು ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಬೈದ್ಯಶ್ರೀ ಜಾನಪದ ಪ್ರಶಸ್ತಿಗಳೂ ಅವರಿಗೆ ಸಂದಿವೆ. ಮಂಗಳೂರು ವಿ.ವಿ.ಯು 2000ರಲ್ಲಿ ಆ ಗೌರವ ಡಾಕ್ಟರೇಟ್‌ ನೀಡಿದೆ. ಅಖಿಲ ಭಾರತ ತುಳುಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆಗಳ ಜೊತೆ ವಿದೇಶಿ ಸಂಸ್ಥೆಗಳಿಂದಲೂ ಸನ್ಮಾನಿತರಾಗಿರುವ ಅವರು ಪ್ರಾಧ್ಯಾಪಕರಾಗಿ, ಈಗ ನಿವೃತ್ತರು. ಅವರ ಜೀವನ ಸಾಧನೆಯನ್ನು ಈ ಕೃತಿ ಪರಿಚಯಿಸುತ್ತದೆ.

About the Author

ನಾ. ದಾಮೋದರ ಶೆಟ್ಟಿ
(02 August 1951)

ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್‌ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್‌, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ...

READ MORE

Related Books