ನಾಗಾರ್ಜುನ -ಅಲ್ಲಮಪ್ರಭು: ಒಂದು ತೌಲನಿಕ ಅಧ್ಯಯನ

Author : ಎಸ್. ನಟರಾಜ ಬೂದಾಳು

Pages 196

₹ 120.00




Published by: ಗೋಧೂಳಿ ಪ್ರಕಾಶನ
Address: ನಂ.35, ಗೋಧೂಳಿ, 5ನೆ ಅಡ್ಡರಸ್ತೆ, ಸಿಂಡಿಕೇಟ್ ಬಡಾವಣೆ, ತುಂಗಾನಗರ, ಬೆಂಗಳೂರು-91

Synopsys

ನಾಗಾರ್ಜುನ ಮತ್ತು ಅಲ್ಲಮಪ್ರಭು ಇಬ್ಬರೂ ಕನ್ನಡದ ಪ್ರಮುಖ ತಾತ್ವಿಕರು. ಅವರಿಬ್ಬರ ತತ್ವ ಜಿಜ್ಞಾಸೆಯನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿದ ಕೃತಿ. ಇದೊಂದು ಸಂಶೋಧನಾ ಕೃತಿ ಆಗಿರುವುದರಿಂದ ಅದರ ಚೌಕಟ್ಟು-ವ್ಯಾಪ್ತಿಯನ್ನು ಆರಂಭದಲ್ಲಿಯೇ ಖಚಿತ ಪಡಿಸಲಾಗಿದೆ. ಕಾಲ ಮತ್ತು ದೇಶಗಳನ್ನು ನಿರಾಕರಿಸುವ ಅಲ್ಲಮ- ನಾಗಾರ್ಜುನರು ದ್ವೈತಾದ್ವೈತಗಳನ್ನು ದಾಟಿದವರು. ಬೌದ್ಧ ತಾತ್ವಿಕತೆಯನ್ನು ವಿವರಿಸಿಕೊಟ್ಟ ಗುರು ನಾಗಾರ್ಜುನನನ್ನು ಎರಡನೆಯ ಬೌದ್ಧ ಎಂದು ಕರೆದು ಗೌರವಿಸಲಾಗಿದೆ. ಬುದ್ಧ ಗುರುವಿನ ತಾತ್ವಿಕತೆಯನ್ನಾಧರಿಸಿ ಬೌದ್ಧ ಮಹಾಯಾನವನ್ನು ಪ್ರವರ್ತಿಸಿದವನು ನಾಗಾರ್ಜುನ. ಕ್ರಿ.ಶ. ಎರಡನೆಯ ಶತಮಾನದವನಾದ ನಾಗಾರ್ಜುನ ಬನವಾಸಿಯ ಬಳ್ಳಿಗಾವೆಯ ನಾಡಿನವನು. ನಂತರ ನಲಂದಾ ವಿಶ್ವವಿದ್ಯಾಲಯ ಅವನ ಕಾರ್ಯಕ್ಷೇತ್ರವಾಗಿತ್ತು. ಕೊನೆಯ ದಿನಗಳನ್ನು ಶ್ರೀಶೈಲದಲ್ಲಿ ಕಳೆದ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಕನ್ನಡ ವಚನ ಚಳುವಳಿಯ ಪ್ರಮುಖ ವಚನಕಾರ ಅಲ್ಲಮಪ್ರಭು. ಸಾಮಾಜಿಕ- ಸಾಂಸ್ಕೃತಿಕ ಚಿಂತನೆ-ಚರ್ಚೆಗೆ ನಾಂದಿ ಹಾಡಿದ ಬಸವಣ್ಣನವರ ಅನುಭವ ಮಂಟಪದ ಶೂನ್ಯ ಸಿಂಹಾಸನದಲ್ಲಿ ಕುಳಿತವನು ಅಲ್ಲಮ. ವಚನಗಳಿಗೆ ತಾತ್ವಿಕ ಚೌಕಟ್ಟು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ ಅಲ್ಲಮ ಬಯಲು ಮತ್ತು ಅದು ಉಂಟು ಮಾಡುವ ಬೆರಗುಗಳನ್ನು ಪದಕ್ಕಿಳಿಸಿದ ತಾತ್ವಿಕ. ನಾಗಾರ್ಜುನನ ಹಾಗೆ ಅಲ್ಲಮ ಕೂಡ ಕೊನೆಯ ದಿನಗಳನ್ನು ಶ್ರೀಶೈಲದಲ್ಲಿ ಕಳೆದ. ಉಭಯ ತಾತ್ವಿಕರ ಚಿಂತನೆ ಮತ್ತು ವೈಚಾರಿಕೆ ನಿಲುವುಗಳನ್ನು ಮುಖಾಮುಖಿಯಾಗಿಸಿ ಮಾಡಿರುವ ತೌಲನಿಕ ಅಧ್ಯಯನದ ಕೃತಿ. ಆದಿ ನಿರಾಳ ಎಂಬ ಮೊದಲ ಅಧ್ಯಾಯದಲ್ಲಿ ಶೂನ್ಯತೆಯ ಅಧ್ಯಯನದ ಸ್ವರೂಪ, ಸಂಶೋಧನೆಯೆಂಬ ರಚನೆ, ಪ್ರಕ್ರಿಯಾ ಮೀಮಾಂಸೆ, ಅಲ್ಲಮಪ್ರಭುವಿನಲ್ಲಿ ಶೂನ್ಯತೆ, ಭಾಷೆ: ಅಲ್ಲಮ-ನಾಗಾರ್ಜುನ ನಿಲುವು ಸೇರಿದಂತೆ ಕನ್ನಡದ ಶ್ರಮಣ ಪರಂಪರೆಯ ಎಳೆಗಳನ್ನು ಚರ್ಚಿಸಲಾಗಿದೆ. ಎರಡನೆಯ ಮಧ್ಯನಿರಾಳ ಅಧ್ಯಾಯವು ಶೂನ್ಯತೆ- ಚಾರಿತ್ರಿಕ ಬೆಳವಣಿಗೆ, ಸರ್ವಾಸ್ತಿವಾದ, ಸೌತಾಂತ್ರಿಕವಾದ, ಪ್ರತೀತ್ಯ ಸಮುತ್ಪಾದ, ಪ್ರಮಾಣ- ಬೌದ್ಧ ಮಾಧ್ಯಮಿಕರ ನಿಲುವು, ಆತ್ಮ ಶೂನ್ಯತೆ, ಆಕಾಶ ಶೂನ್ಯತೆಗಳನ್ನು ಚರ್ಚಿಸಲಾಗಿದೆ. ಮೂರನೇ ಅಧ್ಯಾಯ ಊರ್ಧ್ವ ನಿರಾಳದಲ್ಲಿ ಅಲ್ಲಮಪ್ರು ಅನುಸಂಧಾನ ಮಾರ್ಗಗಳು, ನಿರಾಳ ಬಯಲು-ಪ್ರಜ್ಞೆಯ ನೆಲ, ಶೂನ್ಯ ಸಂಪಾದನೆಯಲ್ಲಿ ಅಲ್ಲಮಪ್ರಭು, ಅಲ್ಲಮನ ವಚನಗಳಲ್ಲಿ ಪ್ರಕ್ರಿಯಾ ಮೀಮಾಂಸೆ ಕುರಿತಾದ ಚರ್ಚೆಗಳಿವೆ. ‘ಗುಹೇಶ್ವರನೆಂಬುದಿಲ್ಲಾಗಿ ಬಯಲೆಂಬುದಿಲ್ಲ’ ಎಂಬ ನಾಲ್ಕನೆಯ ಅಧ್ಯಾಯದಲ್ಲಿ ಒಂದರಿಂದ ಇನ್ನೊಂದು ಅನ್ಯವೆ? ಅನನ್ಯವೆ? ಅಧಿಕಾರವೆಂಬ ಚಾಲಕಶಕ್ತಿ, ಸಮ್ಯಕ್ ದೃಷ್ಟಿ ಎಂಬ ಬಯಲು, ಕರುಣಾ ಮೈತ್ರಿಯೆಂಬ ಬೆಸುಗೆ ಕುರಿತ ಅಧ್ಯಯನವಿದೆ. ಅನುಬಂಧದಲ್ಲಿ ಪಾರಿಭಾಷಿಕ ಪದಗಳ ಅರ್ಥವಿವರಣಾ ಕೋಶ ನೀಡಿರುವುದು ಉಪಯುಕ್ತವಾಗಿದೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books