ಲೇಖಕಿ ಅಮೃತಾ ಶೆಟ್ಟಿ ಆತ್ರಾಡಿ, ಜನವರಿ 17, 1969ರಲ್ಲಿ ಜನಿಸಿದರು. ಇವರು ಮೂಲತಃ ದ.ಕ. ಜಿಲ್ಲೆಯ ಆತ್ರಾಡಿಯ ಹಿರಿಯಡ್ಕದವರು. ಕನ್ನಡ ಪತ್ರಿಕೆಗಳಲ್ಲಿಇವರ ಲೇಖನ, ಸಾಹಿತ್ಯ, ಬರಹಗಳು ಪ್ರಕಟಗೊಂಡಿವೆ. ಇವರು ತುಳುಭಾಷೆಯಲ್ಲಿ ರಚಿಸಿದ ಪಾಡ್ದನವನ್ನು ಕುಪ್ಪಂ ವಿಶ್ವವಿದ್ಯಾನಿಲಯವು ತೆಲುಗು ಮತ್ತು ತುಳುಭಾಷೆಗೆ ಭಾಷಾಂತರಿಸಿದೆ. ಕನಕದಾಸರ ಕೃತಿಗಳನ್ನು ತುಳು ಭಾಷೆಗೆ ಅನುವಾದಿಸುವ ಭಾಷಾಂತರ ಕಾಯಕದಲ್ಲಿ ಇವರೂ ಓರ್ವ ಸಹಸಂಪಾದಕರಾಗಿದ್ದಾರೆ.