About the Author

ಅನಸೂಯ ಕಾಂಬಳೆ ಅವರು ದಲಿತ ಮಹಿಳಾ ಸಂವೇದನೆಯ ಕನ್ನಡದ ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರು. 1970ರ ಡಿಸೆಂಬರ್ 28 ರಂದು ಜನಿಸಿದ ಅನಸೂಯ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಮಲಾಪೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.’ಬರಗೂರರ ಕಾದಂಬರಿಗಳು : ಒಂದು ಅಧ್ಯಯ’ ಎಂಬ ಪ್ರಬಂಧ ಸಲ್ಲಿಸಿ ಎಂ.ಫಿಲ್ ಪದವಿ ಮತ್ತು ’ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ' ಎಂಬ ಕಾವ್ಯವನ್ನು ಅನುಲಕ್ಷಿಸಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್. ಡಿ. ಪದವಿ ಪಡೆದಿದ್ದಾರೆ

ಮುಳ್ಳು ಕಂಟಿಯ ನಡುವೆ (ಕವನ ಸಂಕಲನ), ವಿಚಾರ ಸಾಹಿತ್ಯ ಮತ್ತು ಹೆಣ್ಣು (ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ ಪ್ರಭಾವ, ಮತ್ಯಗಂಧಿಯ ಹಾಡು (ಕವನ ಸಂಕಲನ) ಇವರ ಪ್ರಕಟಿತ ಪುಸ್ತಕಗಳು, ಶ್ರೀಗಂಧಹಾರ ಪ್ರಶಸ್ತಿ, ಕಸಾಪ ದತ್ತಿನಿಧಿ ಪ್ರಶಸ್ತಿ, ಇಂಚಲ ಕಾವ್ಯ ಪ್ರಶಸ್ತಿ ಅವರಿಗೆ ದೊರೆತಿವೆ.

ಹುಕ್ಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅನಸೂಯ ಕಾಂಬಳೆ

(28 Dec 1970)