About the Author

ಕವಿ ಕಾದಂಬರಿಕಾರ ಅಶೋಕ ಹೆಗಡೆ  22 ಜುಲೈ 1967 ರಂದು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಗುಂಜಗೋಡ ಎಂಬಲ್ಲಿ ಜನಿಸಿದರು. ಬದುಕಿನ ಬೆರಗುಗಳನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅದನ್ನು ಕವಿತೆ, ಕಥೆ, ಕಾದಂಬರಿಗಳ ಮೂಲಕ ಮರುಶೋಧಿಸುವ ಕಥೆಗಾರ ಅಶೋಕ ಹೆಗಡೆ. ವೃತ್ತಿರಂಗದ ವಿಶಾಲ ಅನುಭವ – ಲೋಕಗ್ರಹಿಕೆ ಅವರ ಕಥೆಗಳಿಗೆ ವಿಭಿನ್ನ ಮೆರುಗು ನೀಡುತ್ತವೆ. ಪ್ರಕಟಿತ ಕೃತಿಗಳು: ಒಂದು ತಗಡಿನ ಚೂರು, ಒಳ್ಳೆಯವನು, ವಾಸನೆ ಶಬ್ದ ಬಣ್ಣ ಇತ್ಯಾದಿ (ಕಥಾಸಂಕಲನಗಳು), ಅಶ್ವಮೇಧ (ಕಾದಂಬರಿ), ಕುರುಡುಕಾಂಚಾಣ (ಅಂಕಣ ಬರಹಗಳು), ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರದ ಎರಡು ಹೊಸ ದಾರಿಗಳು (ಸಾಮಾಜಿಕ). ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಅವರ ಕಥೆಗಳು ಮೂರು ಬಾರಿ ಬಹುಮಾನ ಪಡೆದಿವೆ., ‘ಯಾವ ಸೀಮೆಯ ಹುಡುಗ’ (1988), ಕೋಟೆ (1989), ತದಡಿಯಲೊಂದು ಹಡಗು (1993)

ಅಶೋಕ ಹೆಗಡೆ

(22 Jul 1967)