About the Author

ರುಕ್ಕಮ್ಮ ಬಿ.ಎಸ್. ಅವರು  ಎಂ.ಎ.(ಕನ್ನಡ) ಸ್ನಾತಕೋತ್ತರ ಪದವೀಧರರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೩-೯-೧೯೩೪ ರಂದು ಮೈಸೂರಿನ  ಬಿ.ಟಿ. ಶ್ರೀನಿವಾಸ ಐಯ್ಯಂಗಾರ್, ಸೀತಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು.

ಇವರ  ಕೃತಿಗಳು : ಶಾಲೆಯ ಮಕ್ಕಳು (ಕಾದಂಬರಿ) ೧೯೫೮. ಅನುವಾದ: ಕೀಟಗಳ ಒಡನಾಡಿ ಫೇಬರ್‌ ಜೀವನ ಮತ್ತು ಕೃತಿ ೧೯೬೦, ಸಮ್ಮುಕ್ತ ಕೌಮುದೀ ಸಂಗ್ರಹ (ಸಂಪಾದಿತ) ೧೯೬೩, ಮೇರಿಕ್ಯೂರಿ ಜೀವನ ಚರಿತ್ರೆ ೧೯೬೮, ಪಾಪು ಅಮ್ಮನಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ) ೧೯೭೧, ಕಚ (ವ್ಯಕ್ತಿಚಿತ್ರ) ೧೯೭೩, ಹರಿಹರ ೧೯೭೩, ವ್ಯಾಪಾರಿ ನುಂಗಣ್ಣ (ಮಕ್ಕಳ ಸಾಹಿತ್ಯ) ೧೯೭೫, ನಂದಗೋಪಿ ಮತ್ತು ಕೃಷ್ಣ ೧೯೭೫, ಮಕ್ಕಳ ಸಾಹಿತ್ಯ (ಸಂಪಾದಿತ) ೧೯೮೫ ರಲ್ಲಿ ಪ್ರಕಟಿಸಿದ್ದಾರೆ.

ಇವರ ಸಾಹಿತ್ಯ ಕೃಷಿಗೆ ದೊರೆತ ಪ್ರಶಸ್ತಿಗಳು  : ಅಖಿಲ ಭಾರತ ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ೧೯೭೧, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ “ಕೀಟಗಳ ಒಡನಾಡಿ ಫೇಬರ್?” ಕೃತಿಗೆ ೧೯೬ ರಲ್ಲಿ ನೀಡಲಾಯಿತು.

ಬಿ.ಎಸ್. ರುಕ್ಕಮ್ಮ