About the Author

ಬಿ.ಟಿ. ಲಲಿತಾ ನಾಯಕ್  ಜನಿಸಿದ್ದು 1945 ಏಪ್ರಿಲ್‌ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ.  

ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ಸೇವೆ, ಸಕಾರಿ ಮುದ್ರಾಣಯದ ನೌಕರಿ ಸಂಘದ ಗೌರವಾಧ್ಯಕ್ಷೆಯಾಗಿ ಸೇವೆ, ರಾಯಚೂರು ಪ್ರತಿಜ್ಞಾ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಬಿ.ಟಿ ಲಲಿತಾ ನಾಯಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮತ್ತು ಅತ್ತಿಮಬ್ಬೆ ಪ್ರತಿಷ್ಠಾನದ ಟ್ರಸ್ಟಿ, ಗೋಕಾಕ್ ಭಾಷಾ ಚಳುವಳಿಯ ಸದಸ್ಯೆ, 2009 ಜುಲೈ - ಬೆಂಗಳೂರು ನಗರ ಜಿಲ್ಲಾ 5ನೇ ಕನ್ನಡ ಸಾಹಿತ್ಯದ ಸಮ್ಮೇಳನ ಅಧ್ಯಕ್ಷತೆಯ ಗೌರವ, ಪ್ರಸ್ತುತ ಕೇಂದ್ರ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಮಹಿಳಾ ಪ್ರತಿನಿಧಿ, 1968 ರೋಡಾಲಬಂಡಾ ಕ್ಯಾಂಪ್ ನ ಸರ್ಕಾರಿ ಶಾಲಾ ಸುಧಾರಣಾ ಸಮಿತಿ ಸದಸ್ಯೆಯಾಗಿ ಸೇವೆ, 1985 ರಿಂದ ಅಖಿಲ ಕರ್ನಾಟಕ ಕನ್ನಡ ಹಿತರಕ್ಷಣಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯೆ(1985),  

 ಕೃತಿಗಳು : ನೆಲೆ ಬೆಲೆ, ಗತಿ, ಕಾವ್ಯ: ನಂ ರೂಪ್ಲಿ, ಇದೇ ಕೂಗು ಮತ್ತೆ ಮತ್ತೆ, ಬಿದಿರು ಮಳೆ ಕಂಟಿಯಲ್ಲಿ (ಸಮಗ್ರ ಕವನ ಸಂಕಲನ), ಹಬ್ಬ ಮತ್ತು ಬಲಿ (ಕತೆ), ಚಂದ್ರ ಪರಾಭವ(1972), ರೇಡಿಯೋ ನಾಟಕ ಸಂಕಲನ (ನಾಟಕ), ಭಟ್ಟನ ಕನಸುಗಳು (ಮಕ್ಕಳ ಸಾಹಿತ್ಯ), ದೇವದುರ್ಗ ತಾಲ್ಲೂಕು ದರ್ಶನ, ರಾಯಚೂರು ತಾಲ್ಲೂಕು ದರ್ಶನ, ಒಡಲ ಬೇಗೆ(ಕವನ ಸಂಕಲನ), ಸವಾಸೇರು (ಕವನ ಸಂಕಲನ), ಬಿ.ಟಿ. ಲಲಿತಾ ನಾಯಕ್ ಚುಟುಕುಗಳು, ಕೈ ಹಿಡಿದು ನಡೆಸೆನ್ನನು, ( ಸಂದರ್ಶನ ಆಧಾರಿತ ಕೃತಿ), ಆತ್ಮಕಥನ, ಪ್ರವಾಸ ಕಥನ : ದಿನಚರಿಯ ಪುಟಗಳಿಂದ (ಶಾಸಕೀಯ ಪ್ರವಾಸದ ಅನುಭವಗಳು), ಬಂಜಾರಾ ಹೆಜ್ಜೆಗುರುತುಗಳು(ಲೇಖ ಸಂಕಲನ), ಗ್ರಹಿಕೆ ಗೊಂಚಲು ( ಲೇಖನಗಳ ಸಂಕಲನ), ಬಿ.ಟಿ ಲಲಿತಾ ನಾಯಕ್ ಅವರ ಸಮಗ್ರ ಸಾಹಿತ್ಯ ಸಂಪುಟ.

ಪ್ರಶಸ್ತಿಗಳು :  ಸಾಹಿತ್ಯ ಸೇವೆಗೆ ಉತ್ತಮ ಶಾಸಕಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜೀವಗಾಂಧಿ ಏಕತಾ ಪ್ರಶಸ್ತಿ, ಶ್ರೀಮತಿ ಸಾವಿತ್ರಮ್ಮ ದೇ.ಜ.ಗೌ. ಮಹಿಳಾ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ಕಿರಣ ಪ್ರಭ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ, ಚನ್ನಬಸವ ಪಟ್ಟದ್ದೇವರ ಪ್ರಶಸ್ತಿ( ಕನ್ನಡ ಅಭಿವೃದ್ದಿ ಬಳಗದಿಂದ), ಹೆಚ್.ಡಿ ದೇವೆಗೌಡ ಪ್ರಶಸ್ತಿ ( ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ 89ನೇ ಕನ್ನಡ ರಾಜ್ಯೋತ್ಯವದ ಅಂಗವಾಗಿ೦, ದಾನ ಚಿಂತಾಮಣಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 

ಬಿ.ಟಿ. ಲಲಿತಾ ನಾಯಕ್

(04 Apr 1945)

BY THE AUTHOR