About the Author

ಹಿರಿಯ ಲೇಖಕ ಬಾಳಣ್ಣ ಶೀಗೀಹಳ್ಳಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ದೇಗಾವಿ ಗ್ರಾಮದವರು.  ಪ್ರಾಧ್ಯಾಕರಾಗಿ ನಿವೃತ್ತರು.  ‘ಡೆಪ್ಯೂಟಿ ಚೆನ್ನಬಸಪ್ಪನವರು: ಜೀವನ ಮತ್ತು ಸಾಧನೆ’ ಕುರಿತು ಮಹಾಪ್ರಂಬಂಧ ರಚಿಸಿದ್ದಾರೆ. ಕೃತಿ ಸಂಗಾತಿ, ರಂಗ ಸಂಗಾತಿ, ಪರಿಭಾವ, ಕನ್ನಡ ರಂಗಚಿಂತನೆ, ಚಿಂತಕರು-ಚಿಂತನಗಳು ಬಸವಣ್ಣ-ಮಹಾವೀರ, ಮರಿಕಲ್ಲಪ್ಪ ಮಲಶೆಟ್ಟಿ ಕೃತಿಗಳನ್ನು ಪ್ರಕಟಿಸಿದ್ದಾರೆ.

‘ರನ್ನನ ಸಾಹಸಭೀಮ ವಿಜಯ : ಪರಾಮರ್ಶೆ, ಫ. ಗು. ಹಳ್ಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ:9, ಬೆಳಗಾವಿ ಜಿಲ್ಲೆಯ ವೀರಶೈವ ದೇಶಗತಿಗಳು, ರಾಧಾನಾಟ, ಆತ್ಮ ಆವ ಕುಲ, ಸ್ಥಾವರವಲ್ಲದ ಬದುಕು, ಭರತ ಚಕ್ರಿಯ ದರ್ಶನ ಲೋಕ, ನಿಜ ಸುಖದ ನಿಲುವು ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. 

ದೇಶನೂರಿನಲ್ಲಿ ಜರುಗಿದ ಬೈಲಹೊಂಗಲ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ (ಜೂನ್ 18, 2012) ಸರ್ವಾಧ್ಯಕ್ಷರಾಗಿದ್ದರು. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಡಾ. ಎಸ್.ಎಸ್. ಕೋತಿನ ವಿಮರ್ಶಾ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಪುಸ್ತಕ ಬಹುಮಾನ, ಸೊಂಡೂರಿನ ಪ್ರಭುದೇವರ ಸಂಸ್ಥಾನ ಮಠದ ಬಸವ ಬೆಳಗು ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಬಾಳಣ್ಣ ಶೀಗೀಹಳ್ಳಿ

(01 Jul 1947)