About the Author

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು. 

ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ಭ್ರಮರಂಗೆ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.

ಬಾಳಾ ಸಾಹೇಬರ ಸಾಹಿತ್ಯ ಕೃಷಿಗಾಗಿ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚದುರಂಗ ಪ್ರಶಸ್ತಿ, 2019ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.

ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ (ಬಿಸಿಲುಪುರ ಮತ್ತು ಹುತ್ತ ಕಾದಂಬರಿ), ಹಾವನೂರ ಪ್ರತಿಷ್ಠಾನ ಹಾವೇರಿ(ಹುತ್ತ ಕಾದಂಬರಿಗೆ), ಸಿಂಗಾರಿಗೌಡ ಸಾಹಿತ್ಯ ಪ್ರಶಸ್ತಿ, ಮಂಡ್ಯ(ನೀಲಗಂಗಾ ಕಾದಂಬರಿಗೆ), ಚದುರಂಗ ಕಾದಂಬರಿ ಪ್ರಶಸ್ತಿ ಮೈಸುರು(ಹುತ್ತ ಕಾದಂಬರಿ), ಮಾಸ್ತಿ ಕಾದಂಬರಿ ಪುರಸ್ಕಾರ ಕೋಲಾರ( ಕೃಷ್ಣೆ ಹರಿದಳು ಕಾದಂಬರಿ), ಗಳಗನಾಥ ಕಾದಂಬರಿ ಪ್ರಸಸ್ತಿ ಹಾವೇರಿ(ಕೃಷ್ಣೆ ಹರಿದಳು ಕಾದಂಬರಿ), ವರ್ಧಮಾನ ಪ್ರಶಸ್ತಿ, ಮೂಡಬಿದಿರೆ(ಸಮಗ್ರ ಸಾಹಿತ್ಯಕ್ಕೆ), ಚಾವುಮಡರಾಯ ಪ್ರಶಸ್ತಿ ಕಸಾಪ ಬೆಂಗಳೂರು(ಜೈನ ಸಾಹಿತ್ಯಕ್ಕೆ), ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ.

ಬಾಳಾಸಾಹೇಬ ಲೋಕಾಪುರ