About the Author

ಬೆಳಗಾವಿ ಜಿಲ್ಲೆಯ ಉಗಾರ ಬುದ್ರುಕ ಮೂಲದವರಾದ ಬಂಡು ಧನಪಾಲ ಕೋಳಿ ಅವರು ಬಂಡು ಕೋಳಿ ಎಂಬ ಕಾವ್ಯ ನಾಮವನ್ನು ಹೊಂದಿದ್ದಾರೆ. ಧನಪಾಲ ಹಾಗೂ ಲಕ್ಷ್ಮೀ ಬಾಯಿಯವರ ಮಗನಾಗಿ 15-05-1980ರಂದು ಜನಿಸಿದರು. ಎಮ್.ಎ. ಬಿ.ಇಡಿ ಶಿಕ್ಷಣವನ್ನು ಪೂರ್ತಿಗೊಳಿಸಿ, ಅಥಣಿಯ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶಿಕ್ಷಣ ವೃತ್ತಿ ಪ್ರಾರಂಭಿಸಿದರು. ಪದವಿ ಕಾಲೇಜಿನ ಬೋಧಕರಾದ ಎಂ.ಬಿ.ಹೂಗಾರ ಅವರ ಪ್ರೋತ್ಸಾಹದಿಮದ ಸಾಹಿತ್ಯ ಓದು ಹಾಗೂ ಸಾಹಿತ್ಯ ಕ್ಷೇತ್ರದತ್ತ ಬರಲು ಕಾರಣವಾಯಿತು. ಗಾಯನ ಹಾಗೂ ಅಭಿನಯ ಇವರ ಇತರೇ ಹವ್ಯಾಸಗಳು.

ಇವರ ಪ್ರಕಟಿತ ಕೃತಿಗಳು ; ಹುಡುಕಾಟ(2011) ಕಾದಂಬರಿ, ಹೃದಯಧಾರೆ(2018) ಕವನ ಸಂಕಲನ, ಕೃಷ್ಣಾಯಿ ಜೋಗುಳ(2021) ಕಥಾ ಸಂಕಲನ . ಹೃದಯಧಾರೆ ಕವನ ಸಂಕಲನಕ್ಕೆ ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ಕೊಡಮಾಡಿದ ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಂಡು ಕೋಳಿ

(15 May 1980)