About the Author

ಬಿ.ಜೆ. ಪಾರ್ವತಿ. ವಿ. ಸೋನಾರೆ ಅವರು ಮೂಲತಃ  ಇವರು  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದ ಹತ್ತಿರವಿರುವ ಕೊಂಕಣಗಾಂವ ಎಂಬ ಗ್ರಾಮದವರು . ತಂದೆ ಜಟಿಂಗರಾಯ ಡಫಳಾಪೂರ ತಾಯಿ ಭೀಮಬಾಯಿ ಡಫಳಾಪೂರ.  ವಿಜಯ ಕುಮಾರ ಸೋನಾರೆಯವರ ಕೈಹಿಡಿದು  ಬೀದರಿನ ವಿಜಯಕಾಲೋನಿಯ ನೆಲೆಸಿದ್ದಾರೆ.  ಇವರು ಅನೇಕ  ನಾಟಕ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.   ಸಂದ ಪ್ರಶಸ್ತಿ ಪುರಸ್ಕಾರ ,ಸನ್ಮಾನಗಳು ಅನೇಕ. 2011 ರಲ್ಲಿ “ ದ ಬ್ಲೆಂಡ್‌ ಫೇತ್‌” ಕಿರುಚಿತ್ರದ ನಟನೆಗಾಗಿ "excellent actor" ಎಂಬ ಪ್ರಶಸ್ತಿ ದೊರೆತಿದೆ. 2016 ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಕಲಬುರ್ಗಿ ವಿ.ವಿ. "ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ" ಪ್ರಶಸ್ತಿ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರು.  2015 ರಲ್ಲಿ ದೇಶಪಾಂಡೆ ಪ್ರತಿಷ್ಠಾನದಿಂದ " ಕವಯಿತ್ರಿ ಕಲಾರತ್ನ ' ಪ್ರಶಸ್ತಿ,  2016 ರಲ್ಲಿ ಶಾರದಾ ಪ್ರತಿಷ್ಠಾನದಿಂದ "ಡಾ ಅಂಬೇಡ್ಕರ್" ಪ್ರಶಸ್ತಿ, 2017ರಲ್ಲಿ ಕಥಾರತ್ನ ಪ್ರಶಸ್ತಿ, 2018 ರಲ್ಲಿ ಅಕ್ಕ ಸಾಹಿತ್ಯಿಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಅಕ್ಕ ಪ್ರಶಸ್ತಿ.  2018 ರಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನಿಂದ " ಬುದ್ಧ ಬಸವ ಅಂಬೇಡ್ಕರ್ ಪ್ರಶಸ್ತಿ, 2020 ನೇ ಸಾಲಿನ ಜಿಲ್ಲಾ ಮಟ್ಟದ " ರಾಜ್ಯೋತ್ಸವ " ಪ್ರಶಸ್ತಿ.  2021 ರಲ್ಲಿ ಮಂದಾರ ಕಲಾವಿದರ ವೇದಿಕೆಯಿಂದ " ಕಥಾ ಚಂದ್ರಿಕಾ " ಪ್ರಶಸ್ತಿ . ಪುಸ್ತಕಗಳು: 'ನಾವಿಬ್ಬರು" ಕವನ ಸಂಕಲನ,  "ಭವರಿ" ಕಥಾ ಸಂಕಲನ,  "ಅವ್ವ ನೀ ಸಾಯಬಾರದಿತ್ತು" ಕಥಾ ಸಂಕಲನ "ನಿಜ ಶರಣ ಅಂಬಿಗರ ಚೌಡಯ್ಯ " ಜೀವನ -ವಚನ -ಭಾವಾರ್ಥ. "ಅಪ್ಪನೊಳಗೊಬ್ಬ ಅವ್ವ" ಸಮಾಜಮುಖಿ ಲೇಖನಗಳು.

ಬಿ.ಜೆ. ಪಾರ್ವತಿ.ವಿ. ಸೋನಾರೆ