About the Author

ಕನ್ನಡದ ಖ್ಯಾತ ಸಾಹಿತಿ, ರಂಗಕರ್ಮಿ ಚಂದ್ರಕಾಂತ ಕುಸನೂರು ಮೂಲತಃ ಕಲಬುರಗಿಯ ಕುಸನೂರಿನವರು. (ಜನನ: 1931ರ ಅಕ್ಟೋಬರ್ 21) ಎಂ.ಎ,  ಬಿ.ಇಡಿ ಪದವೀಧರರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರ್ಗಿಯಲ್ಲಿ ರಂಗ ಮಾಧ್ಯಮ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ, ಕನ್ನಡದಲ್ಲಿ ವಿಭಿನ್ನ ಮಾದರಿಯ ನಾಟಕಗಳನ್ನು ರಚಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಆನಿ ಬಂತಾನಿ, ರಿಹರ್ಸಲ್, ರತ್ತೋ ರತ್ತೋ ರಾಯನ ಮಗಳೇ, ದಿಂಡಿ, ವಿದೂಷಕ, ಹಳ್ಳಾ ಕೊಳ್ಳಾ ನೀರು ನಾಟಕಗಳನ್ನು ರಚಿಸಿದ್ದಾರೆ, ಜೊತೆಗೆ, ನಂದಿಕೋಲು ಎನ್ನುವ ಕಾವ್ಯ ಸಂಕಲನ, ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ಕೆರೂರು ನಾಮ, ಚರ್ಚ್ ಗೇಟ್ ಕಾದಂಬರಿ ರಚಿಸಿದ್ದು ಮಾತ್ರವಲ್ಲ; ಅನುವಾದ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯ ಕ್ಷೇತ್ರದ ಸೇವೆಗಾಗಿ ‘ಯಾತನಾ ಶಿಬಿರ’ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ಅವರು 2020 ಏಪ್ರಿಲ್ 18ರಂದು ನಿಧನ ಹೊಂದಿದರು. 

ಚಂದ್ರಕಾಂತ ಕುಸನೂರ

(21 Oct 1931-18 Apr 2020)

ABOUT THE AUTHOR