About the Author

ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಚಂದ್ರಶೇಖರ ಮಾಡಲಗೇರಿ ಅವರು ಹಲವಾರು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಸಾಹಿತ್ಯ ಕೃಷಿ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಕೊಂಡಿರುವ ಇವರ ನಾಲ್ಕು ಕೃತಿಗಳು ಜನಮಾನಸದಲ್ಲಿ ನೆಲೆಗೊಂಡಿವೆ. ಇವರದೇ ಪ್ರಕಾಶನಗಳಾದ ಚೇತನ ಬುಕ್ಸ್ ಅಂಡ್ ಮೀಡಿಯಾ ಹೌಸ್ ಹಾಗೂ ಸ್ಯ್ಯಾಗ್ ಪಬ್ಲಿಕೇಶನ್ ಮೂಲಕ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಸದ್ಯ ಚೇತನ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರಲ್ಲದೇ ಅಂಕಣಕಾರರಾಗಿ ಪತ್ರಕರ್ತರಾಗಿದ್ದಾರೆ.

ಚಂದ್ರಶೇಖರ ಮಾಡಲಗೇರಿ

(01 Dec 1982)