About the Author

ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಗಿರೀಶ್ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. ತಂದೆ ಮೈಸೂರಿನ ನಂಜನಗೂಡು ಮೂಲದ ಕೆ.ಎಸ್. ಕೇಶವನ್ ತಾಯಿ, ಸುಲೋಚನಾ. ಇವರ ಮನೆಯ ಹಿರಿಯರು ಊರಿನ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಕಾರಣ ದೀಪಾ ಪೂಜೆ-ಪುನಸ್ಕಾರ ಮತ್ತು ಸಂಪ್ರದಾಯಸ್ಥ ವಾತಾವರಣದ ಮಧ್ಯೆಯೇ ಬೆಳೆದರು. ದೀಪಾ ಹುಟ್ಟಿದ್ದು ಹಳ್ಳಿಯಲ್ಲಾದರೂ ಓದಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಪತ್ರಿಕೋದ್ಯಮ ಅಧ್ಯಯನ ಮಾಡಿರುವ ದೀಪಾ ಎಂ.ಎ.ಪದವೀಧರರು. ಓದಿದ್ದು ಪತ್ರಿಕೋದ್ಯಮವಾದರೂ ರಂಗಭೂಮಿ, ಸಾಹಿತ್ಯದೆಡೆಗೆ ಸದಾ ತುಡಿತ ಉಳ್ಳವರು. ಹೀಗಾಗಿಯೇ ಸಮಾನ ಆಸಕ್ತಿಯ ಗಿರೀಶ್​ ಹಂದಲಗೆರೆಯವರೊಂದಿಗೆ ಪ್ರೇಮ ವಿವಾಹವಾದರು. ಹಲವು ಸಂಘಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳೊಂದಿಗೆ ಕೆಲಸ ಮಾಡಿರುವ ದೀಪ ಗಿರೀಶ್ ಸದ್ಯ ಸ್ವಂತ ಉಧ್ಯಮ ನಡೆಸುತ್ತಿದ್ದಾರೆ. ಇವರ ಪ್ರಕಟಿತ ಕೃತಿ-ಅಸ್ಮಿತೆ 

ದೀಪಾ ಗಿರೀಶ್ (ದೀಪದ ಮಲ್ಲಿ)