About the Author

’ಜಗವೆಲ್ಲಾ ನಗುತಿರಲಿ; ಜಗದಳವು ನನಗಿರಲಿ’ ಎಂಬ ಕವನದ ಸಾಲುಗಳ ಕವಿ ಈಶ್ವರ ಸಣಕಲ್ಲ ಅವರು ಜನಿಸಿದ್ದು 1906 ಡಿಸೆಂಬರ್ 20ರಂದು. ಹುಟ್ಟೂರು ಬೆಳಗಾವಿ ಜಿಲ್ಲೆಯಗೋಕಾಕ್‌ ತಾಲ್ಲೂಕಿನ ಯಾದವಾಡ. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿರುವ ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಇದ್ದ ಸಣಕಲ್ಲ ಅವರು ಬರೆದಿರುವ ಕೃತಿಗಳೆಂದರೆ ಕೋರಿಕೆ, ಹುಲ್ಕಲ್ಗೆಕಿಡಿ(ಕವನ ಸಂಕಲನ), ಬಟ್ಟೆ (ಕಥಾ ಸಂಕಲನ), ಸಂಸಾರ ಸಮರ (ಕಾದಂಬರಿ), ಗ್ರಾಮೋದ್ಧಾರ (ಅನುವಾದಿತ ಕೃತಿ). 

ಸಹಕಾರ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿರುವ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಇವರ ‘ಬಟ್ಟೆ’ ಸಂಕಲನಕ್ಕೆ ರಾಜ್ಯ ಸರಕಾರದ ಪ್ರಥಮ ಬಹುಮಾನ ಸಂದಿದೆ.1980ರಲ್ಲಿ ಬೆಳಗಾವಿಯಲ್ಲಿ ನಡೆದ 52ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷರಾಗಿದ್ದರು.

ಈಶ್ವರ ಸಣಕಲ್ಲ

(20 Dec 1906-03 Dec 1984)

Books by Author