About the Author

ಹಿರಿಯ ಲೇಖಕ ಜಿ.ಕೆ. ಕುಲಕರ್ಣಿ ಅವರು ವಿಜಯಪುರ  ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರು. ತುಮಕೂರು ಜಿಲ್ಲಾ ಆರೋಗ್ಯ  ತರಬೇತಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾಗಿ ನಿವೃತ್ತರು. ಸದ್ಯ ತುಮಕೂರಿನಲ್ಲಿ ವಾಸವಿದ್ದಾರೆ. ಎಚ್ ಐವಿ, ಏಡ್ಸ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ಕುರಿತು ಜನಜಾಗೃತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧಾರವಾಡ, ಹೊಸಪೇಟೆ ಸೇರಿದಂತೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಿಂದ ಇವರ ಕವನ-ಬರಹಗಳು ಪ್ರಸಾರಗೊಂಡಿವೆ.  ಕತ್ತಲೆ ಕರಗಿತು ಎಂಬ ರೇಡಿಯೋ ನಾಟಕವು ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರಗೊಂಡಿದೆ. ನಗೆ ಮಲ್ಲಿಗೆ, ಹಾಸ್ಯಸಿಂಚನ ಹಾಗೂ ಹಾಸ್ಯಲೋಕ ಹೀಗೆ ವಿವಿಧ ವೇದಿಕೆಗಳಲ್ಲಿ ಹಾಸ್ಯ ಕಾರ್ಯಕ್ರಮ ನೀಡಿದ್ದಾರೆ. ಅಧ್ಯಾತ್ಮಿಕ ಉಪನ್ಯಾಸ, ಜೀವನ ಕೌಶಲ್ಯಗಳ ಕುರಿತೂ ಉಪನ್ಯಾಸಗಳನ್ನು ನೀಡುತ್ತಾರೆ. 

ಕೃತಿಗಳು: ಸ್ಫೂರ್ತಿ, ಬಾ ವಸಂತ, ಚುಟುಕು ರಶ್ಮಿ, ಸಂಜೀವಿನಿ (ಕವನ ಸಂಕಲನಗಳು), ಕತ್ತಲೆ ಕರಗಿತು, ಸಂಜೀವಿನಿ, ಬೆಳಕಿನೆಡೆಗೆ ಹಾಗೂ ಶಾಲೆ ತೋರಿದ ದಾರಿ (ರೋಗಗಳ ಕುರಿತು ಜಾಗೃತಿ ಮೂಡಿಸುವ ರೇಡಿಯೋ ನಾಟಕಗಳು), ಆರೋಗ್ಯ ಚಿಂತನ (ಲೇಖನಗಳ ಸಂಗ್ರಹ), ಸರ್ವಜ್ಞ ವಾಣಿ

ಪ್ರಶಸ್ತಿ-ಪುರಸ್ಕಾರಗಳು: ಬಳ್ಳಾರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ 2004ನೇ ಸಾಲಿನ ಚುಟುಕು ಶ್ರೀ ಪ್ರಶಸ್ತಿ, ಹೊಸಪೇಟೆಯ ಚಿತ್ವಾಡಗಿಯ ಸಂಗೀತ ಭಾರತಿ ಹಾಗೂ ಸಾಂಸ್ಕೃತಿಕ ಸಮಿತಿಯಿಂದ ಆರೋಗ್ಯ ಶಿಕ್ಷಣದ ಸಾಧನೆಗೆ ಗೌರವ, ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸೇವಾರತ್ನ ಪ್ರಶಸ್ತಿ, ತುಮಕೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೌರವ, ತುಮಕೂರು ಜಿಲ್ಲಾ ಉತ್ಸವ ಅಂಗವಾಗಿ ಸನ್ಮಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಗೌರವ-ಸನ್ಮಾನಗಳು ಲಭಿಸಿವೆ. 

 

ಜಿ.ಕೆ. ಕುಲಕರ್ಣಿ

(01 Mar 1953)