About the Author

ಕವಿ, ಲೇಖಕ ಈಶ್ವರ ಮಮದಾಪೂರ ಅವರು ಬೆಳಗಾವಿ (ಜನನ: 01-07-1968) ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದವರು. ತಂದೆ- ವಿರೂಪಾಕ್ಷಪ್ಪ, ತಾಯಿ- ರತ್ನವ್ವ. ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯಿಂದ ಹಿಂದಿಯಲ್ಲಿ ಬಿ.ಎ ಪದವಿ ಪಡೆದಿದ್ದು, ಬೆಳಗಾವಿಯ ಕೆಎಲ್ ಇ ಶಿಕ್ಷಣ ಸಂಸ್ಥೆಯಿಂದ ಟಿಸಿಎಚ್ ಪೂರೈಸಿದ್ದಾರೆ. ಸದ್ಯ, ಗೋಕಾಕ್ ನ ಸರಕಾರಿ ಅನುದಾನಿತ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದಾರೆ. 

ಇವರ ಮೊದಲ ಗಜಲ್ ಕೃತಿ ‘ಗೋರಿಯೊಳಗಿನ ಉಸಿರು’ ಪ್ರಕಟಗೊಂಡಿದೆ. ಮಮದಾಪೂರ ಚುಟುಕುಗಳು, ಮಮದಾಪೂರ ಹನಿಗವಿತೆಗಳು, ಕಾವ್ಯಯಾನ(ಕವನ ಸಂಕಲನ ಸಂಪಾದನೆ) ಪ್ರಕಟವಾಗಿವೆ. 

ಗೋಕಾಕದ ಸಾಹಿತ್ಯ ಚಿಂತನ ಕಮ್ಮಟದ ಸ್ಥಾಪಕ ಸಂಚಾಲಕರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು (3 ಅವಧಿಗೆ ), ಸಿರಿಗನ್ನಡ ತಾಲೂಕು ವೇದಿಕೆ ಅಧ್ಯಕ್ಷರು,  ಕ.ಸಾ.ಪ.ಗೌ. ಕಾರ್ಯದರ್ಶಿಯಾಗಿದ್ದರು. 

ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರ  ಸೇವೆಗಾಗಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ತುಮಕೂರಿನ ಹನಿಹನಿ ಬಳಗ ಹಾಗೂ ಸ್ನೇಹ ಸಂಗಮ ಬಳಗದಿಂದ ಪ್ರಶಸ್ತಿ ಹಾಗೂ ಸನ್ಮಾನ ಸ್ಪೂರ್ತಿ ರತ್ನ, ಬೆಳಕು ಕಾಯಕ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಮುಂಬೈಯಲ್ಲಿ ಸಾಹಿತ್ಯ ಭೂಷಣ, ಜಿಲ್ಲಾಮಟ್ಟದ ಸಾಧನ ಪ್ರಶಸ್ತಿ, 68ನೇ ಗಣರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

ಈಶ್ವರ ಮಮದಾಪೂರ

(01 Jul 1968)