About the Author

ಜಂಬಣ್ಣ ಅಮರಚಿಂತ ಅವರು 1945 ಏಪ್ರಿಲ್ 7ರಂದು ರಾಯಚೂರಿನಲ್ಲಿ ಜನಿಸಿದರು. ಆರೋಗ್ಯ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಂಬಣ್ಣ ಅವರು ಬರೆದ ಪ್ರಮುಖ ಕೃತಿಗಳೆಂದರೆ ಮುಂಜಾವಿನ ಕೊರಳು, ಅಧೋ ಜಗತ್ತಿನ ಆಕಾವ್ಯ; (ಕವನ ಸಂಗ್ರಹಗಳು), ಝರಿ-ಬೆಟ್ಟ (ಕಾದಂಬರಿ),ಅಮರಚಿಂತ ಕಾವ್ಯ (ಸಮಗ್ರ ಕಾವ್ಯ). ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಜಂಬಣ್ಣ ಅಮರಚಿಂತ

(07 Apr 1945)