About the Author

ಕೆ. ಎ. ದಯಾನಂದ ಅವರು ಐಎಎಸ್ ಅಧಿಕಾರಿಯಾಗಿ ಭಾರತೀಯ ಉನ್ನತ ಹುದ್ದೆಯನ್ನಲಂಕರಿಸಿ ಅಪಾರ ಸೇವೆ-ಸಾಧನೆಗೈದವರು. 1976 ಮಾರ್ಚ್ 26ರಂದು ಕೆಸ್ತೂರು ಕೊಪ್ಪದಲ್ಲಿ ಜನಿಸಿದರು. ಬಡಕುಟುಂಬದಲ್ಲಿ ಜನಿಸಿದ ದಯಾನಂದ್ ಅವರು ಬದುಕಿನ ಬವಣೆಗಳನ್ನು ಸಕಾರಾತ್ಮವಾಗಿ ಬಳಸಿಕೊಂಡು ಅಕ್ಷರ ಜ್ಞಾನವನ್ನು ಪಡೆದರು. ದುಡಿಯುತ್ತಲೇ ವಿದ್ಯಾಭ್ಯಾಸ ಪೂರೈಸಿ, ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ರಾಜ್ಯ ಆಡಳಿತ ಸೇವೆಯ ಅಧಿಕಾರಿಯಾಗಿ ನೇಮಕಗೊಂಡು ಸೇವೆ ಮಾಡುತ್ತಲೇ ಐಎಎಸ್ ಅಧಿಕಾರಿಯಾಗಿ ಪಟ್ಟ ಗಳಿಸಿದರು. ಅವರ ಜೀವನಾನುಭವ ಕೃತಿ ‘ಹಾದಿಗಲ್ಲು’ (2020)ರಲ್ಲಿ ಪ್ರಕಟವಾಗಿದೆ.

ಕೆ. ಎ. ದಯಾನಂದ

(26 Mar 1976)