About the Author

ಕರುಣಾಕರ ಎನ್. ಶೆಟ್ಟಿ ಅವರು ಕರಾವಳಿಯ ಉಡುಪಿ ಜಿಲ್ಲೆಯ ಪಣಿಯೂರಿನಲ್ಲಿ ಜನಿಸಿದರು. ಉಡುಪಿಯಲ್ಲೇ ಬಿ.ಎ ಪದವಿಗಳಿಸಿ 1978ರಲ್ಲಿ ಮುಂಬಯಿಯ ಅಭ್ಯುದಯ ಸಹಕಾರಿ ಬ್ಯಾಂಕಿಗೆ ನೇಮಕಾತಿಗೊಂಡು ವೃತ್ತಿಯೊಡನೆ ಪ್ರವೃತ್ತಿ ವಿದ್ಯಾಭ್ಯಾಸ ಮುಂದುವರಿಸುತ್ತಾ ಎಂ.ಎ., ಎಂ.ಫಿಲ್, ಪಿಎಚ್.ಡಿ ಪದವಿ ಗಳಿಸಿದವರು-ಡಾ. ಕರುಣಾಕರ್ ಎನ್. ಶೆಟ್ಟಿ ಪಣಿಯೂರ್. 

ಬದುಕಿನ ಮಾರ್ಗವನ್ನು ಹುಡುಕಿಕೊಂಡು ದೂರದ ಮಾಯಾನಗರಿ ಮುಂಬಯಿಗೆ ಹೋದವರು ಅಲ್ಲೂ ತಮ್ಮನ್ನು ಕೇವಲ ದುಡಿತಕ್ಕೆ ಸೀಮಿತವಾಗಿರಿಸಿಕೊಳ್ಳದೆ, ತಮ್ಮಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಪರಿಚಯಿಸಿದ್ದಾರೆ. ಮುಂಬಯಿಯ ಡಾ. ಜಿ.ಡಿ. ಜೋಶಿ ಮತ್ತಿತರ ಸಹೃದಯರ ಸಹಕಾರದಿಂದ ಅವರಲ್ಲಿದ್ದ ಸಾಹಿತ್ಯ ಕಲೆ ಅರಳಿತು. ನಾಡಿನ ಒಳನಾಡಿನ ಬಹುತೇಕ ಪತ್ರಿಕೆಗಳಲ್ಲಿ ಅವರ ಲೇಖನಗಳು ಬೆಳಕು ಕಂಡಿವೆ.

ಹಲವು ಪ್ರಶಸ್ತಿ ಬಹುಮಾನಗಳ ವಿಜೇತರಾಗಿರುವ ಶೆಟ್ಟಿ, ಕ.ಸಾ.ಪ. ಮಹಾರಾಷ್ಟ್ರ ಘಟಕದ ಕಾರ್ಯದರ್ಶಿಯಾಗಿ ನಿರಂತರ ಮೂರು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. (2004-2014) ಡಾ: ಜಿ. ಡಿ. ಜೋಶಿ ಪ್ರತಿಷ್ಠಾನದ ಕೋಶಾಧಿಕಾರಿಯಾಗಿ, ಪತ್ರ ಪುಷ್ಪ ಮಾಸಿಕದ (ಬೋಂಬೆ ಬಂಟ್ಸ್ ಅಸೋಸಿಯೇಶನ್) ಉಪ ಸಂಪಾದಕರಾಗಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಸಾಹಿತ್ಯಕ ಸಮಿತಿ ಕಾರ್ಯಧ್ಯಕ್ಷರಾಗಿ, ಸಾಹಿತ್ಯ ಬಳಗ ಮುಂಬಯಿಯ ಕಾರ್ಯದರ್ಶಿಯಾಗಿ ಕನ್ನಡ ತುಳು ಭಾಷೆಗಳಾಗಿ ದುಡಿಯುತ್ತಿರುವ ಶೆಟ್ಟಿ ಅವರು ಅತ್ಯುತ್ತಮ ನಾಟಕ ಕಲಾವಿದರೂ ಆಗಿದ್ದಾರೆ. 25ಕ್ಕೂ ಹೆಚ್ಚು ಇವರ ಕೃತಿಗಳು ಪ್ರಕಟವಾಗಿವೆ.

ಕರುಣಾಕರ ಎನ್. ಶೆಟ್ಟಿ