About the Author

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದವರಾದ ಕಟ್ಟೆ ಗುರುರಾಜ್‌ ವೃತ್ತಿಯಲ್ಲಿ ಪತ್ರಕರ್ತರು.  ತಂದೆ - ಕೆ.ರಾಮಚಂದ್ರರಾವ್, ತಾಯಿ ಸಾವಿತ್ರಮ್ಮ. ಊರಲ್ಲೇ ಪ್ರಾಥಮಿಕ ಶಿಕ್ಷಣ ಹಾಗೂ ಪದವಿ ಶಿಕ್ಷಣ ಪಡೆದ ಇವರು, ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮೈಸೂರು ವಿವಿ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. 

ಪತ್ರಿಕೋದ್ಯಮ ವೃತ್ತಿ ಸೇರಿದ ಮೇಲೆ ಸಂಗೀತ, ಓದು, ಬರಹ, ಚಿತ್ರಕಲೆ, ಸಿನಿಮಾ, ಸುತ್ತಾಟ ಇವರ ಪ್ರವೃತ್ತಿ. ಕಳೆದ 16 ವರ್ಷಗಳಲ್ಲಿ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡಪ್ರಭದಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. 'ಕರಗುತಿರುವ ಹಿಮಾಲಯದ ನೀರ್ಗಲ್ಲುಗಳು' ಬರಹಕ್ಕೆ 2008ರ ‘ಚರಕ ಪ್ರಶಸ್ತಿ’ ದೊರೆತಿದೆ. ‘ಥ್ರಿಲ್ಲಿಂಗ್ ವೀರಪ್ಪನ್’, ‘ಆನೆ ಡಾಕ್ಟ್ರ ಆತ್ಮಕಥೆ’ ಚೊಚ್ಚಲ ಕೃತಿಗಳು. ನೀರಿಗೆ ಸಂಬಂಧಿಸಿದ ‘ಆಪೋಶನ’ ಇವರ ಮೂರನೇ ಕೃತಿ. ‘ರಾಜ್‌ಕುಮಾರ್ ಮತ್ತಷ್ಟು ಮುಖಗಳು’ ಇವರ ನಾಲ್ಕನೇ ಕೃತಿ.

ಕಟ್ಟೆ ಗುರುರಾಜ್

(06 Oct 1977)