About the Author

ಹೊನ್ನಾಳಿ ತಾಲ್ಲೂಕಿನ ಮಾಸಡಿಯಲ್ಲಿ ಜನಿಸಿದ ಕೃಷ್ಣ ಮಾಸಡಿಯವರು ಪತ್ರಕರ್ತರಾಗಿ, ಸಾಹಿತಿಯಾಗಿ, ಚಲನಚಿತ್ರ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಕಾಣಿಸಿದ್ದಾರೆ. 'ಲಂಕೇಶ್ ಪತ್ರಿಕೆ'ಯಲ್ಲಿ ಆರಂಭಿಕ ವರದಿಗಾರರಾಗಿ, ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ (2012) ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರೂ ಆಗಿದ್ದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದವರು ಮಾಸಡಿಯವರು. ತಮ್ಮದೇ ಕಾದಂಬರಿ 'ನಂಬಿಕೆಗಳು ಆಧರಿಸಿದ ಚಲನಚಿತ್ರವನ್ನೂ ನಿರ್ದೇಶಿಸಿದವರು. ಎಸ್. ನಿಜಲಿಂಗಪ್ಪ, ಡಿ. ದೇವರಾಜ ಅರಸು, ಪು.ತಿ.ನ., ಜಿ.ಎಸ್.ಎಸ್., ಮಹಾಕವಿ ಪಂಪ, ಯು.ಆರ್. ಅನಂತಮೂರ್ತಿ, ಡಿ. ವೀರೇಂದ್ರ ಹೆಗ್ಗಡೆ, ಎಸ್.ಜೆ. ಸಿದ್ಧರಾಮಯ್ಯ ಸೇರಿ ಸುಮಾರು 30 ಗಣ್ಯರನ್ನು ಕುರಿತ ಸಾಕ್ಷ್ಯ ಚಿತ್ರಗಳನ್ನು ರಾಜ್ಯ ಕೇಂದ್ರ ಸರ್ಕಾರಗಳ ಇಲಾಖೆಗಳಿಗಾಗಿ ನಿರ್ಮಿಸಿದ್ದರು. ಅದರ ಜೊತೆಗೆ, ದೂರದರ್ಶನಕ್ಕೆ 'ಜೇನುಗೂಡು' ಮತ್ತು 'ಭಾರತೀಪುರ' (ಯು.ಆ‌ ಅನಂತಮೂರ್ತಿಯವರ ಕಾದಂಬರಿ ಆಧಾರಿತ) ಧಾರಾವಾಹಿಗಳನ್ನು ನಿರ್ಮಿಸಿದ್ದರು. ಈಗ ಕೃಷ್ಣ ಮಾಸಡಿಯವರ 'ಸಮಗ್ರ ಕತೆಗಳು' ಕೃತಿ ಪ್ರಕಟವಾಗುತ್ತಿದೆ.

ಕೃತಿಗಳು: ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ...(ಕಥಾ ಸಂಕಲನ), ಗ್ಯಾನಿ ಮತ್ತು ಗುಲಾಬಿ (ಕಥಾ ಸಂಕಲನ), ವೃತ್ತ (ಕಾದಂಬರಿ), ನಂಬಿಕೆಗಳು (ಕಾದಂಬರಿ), ಭೂತ (ಕಥಾ ಸಂಕಲನ), ಸ್ವರ್ಗದ ಬಣ್ಣ(ಲೇಖನಗಳ ಸಂಕಲನ), ಕೃಷ್ಣ ಮಾಸಡಿ ಸಮಗ್ರ ಕತೆಗಳು. 

ಕೃಷ್ಣ ಮಾಸಡಿ

BY THE AUTHOR