About the Author

ಬೆಳಗಾವಿಯಲ್ಲಿ ಜನಿಸಿ ವಿಜ್ಞಾನದಲ್ಲಿ ಬಿ.ಎಸ್ಸಿ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು. ಆಗಲೇ ಸಾಹಿತ್ಯದ ಅಭಿರುಚಿ ಹೊಂದಿದ್ದರು. ದೆಹಲಿಯಲ್ಲಿ ವಾಸವಾಗಿದ್ದಾಗ ದೆಹಲಿ ಕರ್ನಾಟಕ ಸಂಘದ 'ಅಭಿಮತ' ಮಾಸಪತ್ರಿಕೆಯ ಮೂಲಕ ಅವರ ಕತೆಗಳು ಪ್ರಕಟವಾಗತೊಡಗಿದವು. ಬೆಂಗಳೂರಿಗೆ ಬಂದ ಮೇಲೆ ಸಾಹಿತ್ಯಾಸಕ್ತಿ ಇನ್ನೂ ಹೆಚ್ಚಾಗಿ ಕಥೆ, ಹಾಸ್ಯ, ಬರಹಗಳನ್ನೊಳಗೊಂಡು ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಕತೆ ಮತ್ತು ಲೇಖನಗಳು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿ ಅನೇಕ ಬಹುಮಾನಗಳನ್ನೂ ಪಡೆದವು.. ಇವೆಲ್ಲ ೧೬ ಕೃತಿಗಳಾಗಿ ಮೂಡಿ ಬಂದಿವೆ. ಅವುಗಳಲ್ಲಿ ಮೂರು ಹಾಸ್ಯ ಲೇಖನ ಮತ್ತು ಪ್ರಬಂಧಗಳ ಸಂಕಲನ ಹಾಗೂ ಒಂದು ಕವನ ಸಂಕಲನವೂ ಸೇರಿವೆ. ಎರಡು ಮಿನಿ ಕಾದಂಬರಿಗಳು, ನಾಲ್ಕು ಜೀವನಚರಿತ್ರೆಗಳೂ ಚಿಕ್ಕದಾಗಿ ಬಂದಿವೆ.

ಅನೇಕ ಕವಿಗೋಷ್ಠಿಗಳಲ್ಲಿ ಕವಿತಾವಾಚನವನ್ನೂ ಮಾಡಿದ್ದಾರೆ. ಆಕಾಶವಾಣಿಯಲ್ಲೂ ಅನೇಕ ಕತೆ ಮತ್ತು ಹಾಸ್ಯದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೂರದರ್ಶನದಲ್ಲೂ ಅಡಿಗೆಯ ಕಾರ್ಯಕ್ರಮಗಳೂ ಆಗಿವೆ. ರಂಗೋಲಿ ಬಿಡಿಸುವದರಲ್ಲೂ ಅವರು ನಿಪುಣರಾಗಿದ್ದು ಅನೇಕ ರಾಜ್ಯಮಟ್ಟದ ಬಹುಮಾನಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳೊಂದಿಗೆ ತ್ರಿವೇಣಿ ಪ್ರಶಸ್ತಿ, ಮುಂಬೈನ ಸುಶೀಲಾಬಾಯಿ ಶೆಟ್ಟಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ.ಇಂದಿರಾ ಪ್ರಶಸ್ತಿ ಮತ್ತು ಇತ್ತೀಚೆಗಿನ ಕನ್ನಡ ಸೇವಾರತ್ನ ಪ್ರಶಸ್ತಿಯೂ ಸೇರಿದೆ.

ಇವರ ಕೃತಿಗಳು

 ಮರಳಿ ಬಂದನಾ ವಸಂತ, ಅವಳ ಭಾವಗಳ ಸುತ್ತ, ಋಣ,  ಗುಂಡ ಪುರಾಣ, ಜೀವಧಾರಾ,  ಆಕ್ರಮಣ, ಆಲದ ನೆರಳು, ಅವತಾರ, ಒಳಗಣ ಜ್ಯೋತಿ

ಬುವಿಯ ಚುಕ್ಕೆ, ಸುಪ್ತಸಾಗರ, ತಿರುವುಗಳು, ಮಿನಿ ಕಾದಂಬರಿಗಳ ಸಂಕಲನ, ಮಲ್ಲಿಗೆ ಬಳ್ಳಿಯ ಅನುಬಂಧಗಳು ಪ್ರಬಂಧಗಳ ಸಂಕಲನ, ದಡ

ಮಧುರಾ ಕರ್ಣಮ್