About the Author

ಮೈ.ನಾ. ಶರ್ಮಾ ಅವರು ಮೂಲತಃ, ಮೈಸೂರಿನವರು. ಮೈಸೂರು ವಿ.ವಿ. ಯಿಂದ ನಾಟಕಶಾಸ್ತ್ರದ ಪದವಿ, ಇತಿಹಾಸ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟೊರೇಟ್‌ ಪದವಿಯನ್ನು ಪಡೆದಿದ್ದಾರೆ. ಇವರ ಪುರಾತತ್ವ ಸಂಶೋಧನೆಯನ್ನು ಪರಿಗಣಿಸಿ ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪರಿಸರದಿಂದ ʻಪೋಸ್ಟ್‌ ಡಾಕ್ಟೊರಲ್‌ ರಿಸರ್ಚ್ ಫೆಲೋಷಿಪ್‌ʼ ಎಂಬ ಉನ್ನತ ಸಂಶೋಧನಾ ಅನುದಾನವನ್ನು ಪ್ರದಾನಿಸಲಾಗಿದೆ. ಶರ್ಮರು ಲಂಡನ್‌, ಆಕ್ಸ್ಫರ್ಡ್‌, ಬೆರ್ಲಿನ್‌, ಪ್ಯಾರಿಸ್‌ ಹಾಗೂ ರೋಮ್‌ ದೇಶಗಳಲ್ಲಿನ ಅನೇಕ ವಸ್ತು ಸಂಗ್ರಹಾಲಯಗಳಲ್ಲಿ ಅಧ್ಯಯನವನ್ನು ಮಾಡಿದ್ದಾರೆ.  ವರ್ಣಚಿತ್ರ, ಅಭಿನಯ, ಹಾಗೂ ಛಾಯಾಚಿತ್ರ ಕಲಾಪ್ರಕಾರಗಳಲ್ಲಿ ಶಾಸ್ತ್ರೀಯ ಅಧ್ಯಯನವನ್ನು ನಡೆಸಿರುವ ಶರ್ಮರು ಇತಿಹಾಸ, ಪುರಾತತ್ವ, ಕಲೆ ಹಾಗೂ ಸಾಮಾನ್ಯ ವಿಷಯಗಳ ಬಗೆಗೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಮೈಸೂರು ವಿ.ವಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಖಾಸಗೀ ಪ್ರಕಾಶಕರಲ್ಲಿ ಇವರ ಅನೇಕ ಕೃತಿಗಳು ಪ್ರಕಟಗೊಂಡಿವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಂತ್ರಜ್ಞ ಹಾಗೂ ಸಂಯೋಜನಾಧಿಕಾರಿಯಾಗಿ ದಶಕಗಳಕಾಲ ಸೇವೆ ಸಲ್ಲಿಸಿದ್ದು, ಪುರಾತತ್ವಶಾಸ್ತ್ರದಲ್ಲಿ ವಿ. ವಿ.ದ ಸ್ನಾತಕೋತ್ತರ ಪದವಿಗಾಗಿ ಪಠ್ಯಕ್ರಮವನ್ನೂ ರಚಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ತಮ್ಮ ವಿಶ್ರಾಂತ ಜೀವನವನ್ನು ಮುಂದುವರೆಸಿದ್ದು, ಕಲೆ ಹಾಗೂ ಇತಿಹಾಸ ಸಂಶೋಧನೆ ಹಾಗು ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ಕರ್ನಾಟಕ ಶಿಲ್ಪದಲ್ಲಿ ಶಿವ, ಪುರಾತತ್ವ ಪರ್ಯಟನೆ (ಸಂಶೋಧನಾ ಕೃತಿಗಳು), ಇದು ಎಂಥಾ ಲೋಕವಯ್ಯಾ?, ಸಂಚು-ವಂಚನೆಗಳ ಲೋಕದಲ್ಲಿ, ಅಂತಃಕರಣದ ಅಂಗಳದಲ್ಲಿ, ಆನೆ (ನೈಜ ನಿರೂಪಣೆಗಳು), ಕಲಾ ವೈಭವ.

ಮೈ.ನಾ. ಶರ್ಮಾ