About the Author

ಗ್ರೀನ್‌ ರೂಮ್‌ ನಾಣಿ ಅಥವಾ ಮೇಕಪ್‌ ನಾಣಿ ಎಂದೇ ಹೆಸರಾಗಿರುವ ನಾಣಿ ಅವರ ಪೂರ್ಣ ಹೆಸರು ಬೆಳವಾಡಿ ನಂಜುಂಡಯ್ಯ ನಾರಾಯಣ. ಇವರು 1929 ನವೆಂಬರ್‌ 3ರಮದು ತುಮಕೂರಿನಲ್ಲಿ ಜನಿಸಿದರು. ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇಂಗ್ಲೆಂಡಿನಲ್ಲಿ ನಾಟ್ಯಕಲೆ ಕಲಿತು, ಪ್ರಸಾಧನ ಕಲೆಗಳ ಆಳ-ಅಗಲವನ್ನು ಅಧ್ಯಯನ ನಡೆಸಿದ್ದಾರೆ. ಸಿನಿಮಾ ನಿದೇರ್ಶನ, ನಟನೆಯಲ್ಲಿಯೂ ತೊಡಗಿಸಿಕೊಂಡಿದ್ದ ಇವರು ನಿವೃತ್ತಿ-ಪ್ರವೃತ್ತಿ ಧಾರವಾಹಿಯನ್ನು ನಿದೇರ್ಶಿಸಿದ್ದಾರೆ. ಪ್ರೊ. ಹುಚ್ಚುರಾಯ ಸಿನಿಮಾದ ಪಾತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯು ಸಂದಿದೆ.  ಇವರಿಗೆ ಕರ್ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ‘ಕಲೆಯಾಗಿ ಪ್ರಸಾದನ’ ಕೃತಿಯನ್ನು ರಚಿಸಿದ್ದಾರೆ.

ಮೇಕಪ್‌ ನಾಣಿ