About the Author

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದವರು. 1968ರ ಮೇ 20 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ’ಆಧುನಿಕ ಮೈಸೂರು  ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ( 1881-1940)’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ (2001) ಪಡೆದರು. 

ನಮ್ಮ ಗ್ರಾಮಗಳು ಅಂದು ಇಂದು,  ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನ, ಭಾರತೀಯ ಸಮಾಜ ಮತ್ತು ದಲಿತರು, ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ, ದಲಿತ ಚರಿತ್ರೆ ರಚನೆಯಲ್ಲಿ ಕಾಡಲೇಬೇಕಾದ ಪ್ರಶ್ನೆಗಳು, ಕರ್ನಾಟಕದ ಸಮಗ್ರ ದಲಿತ ಚರಿತ್ರೆ. ಅವರ ಪ್ರಕಟಿತ ಕೃತಿಗಳು.

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು,  ಸಮಾಕಾಲೀನ ಕರ್ನಾಟಕ- ವಿವಿಧ ಆಯಾಮಗಳು, ಸಮಕಾಲೀನ ಆಫ್ರಿಕಾ- ವಿವಿಧ ಆಯಾಮಗಳು, ಕನ್ನಡ ನೆಲದಲ್ಲಿ ಬೌದ್ಧಧರ್ಮ ಚರಿತ್ರೆ ಅಧ್ಯಯನ ಅವರ ಸಂಪಾದಿತ ಕೃತಿಗಳು.

ಪುಸ್ತಕ ವಿಮರ್ಶಾ ಪ್ರಶಸ್ತಿ, ಅಖಿಲ ಭಾರತ ದಲಿತ ಸಾಹಿತ್ಯ ಪರಿಷತ್ ನ ಗೌರವ ಪ್ರಶಸ್ತಿ, ಕೆ. ಸಿಂಗಾರಿಗೌಡ ಪ್ರಶಸ್ತಿ, ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಪುಸ್ತಕ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕ್ರಾಂತಿಕಾರಿ ಬಿ. ಬಸವಲಿಂಗಪ್ಪ ಸಂಘಟನಾ ಪ್ರಶಸ್ತಿ, ಮಹಾತ್ಮ ಜ್ಯೋತಿಭಾ ಫುಲೆ ಪ್ರಶಸ್ತಿ ಹಾಗೂ ರಾಷ್ಟೀಯ ಶಿಕ್ಷಣ ರತ್ನ ರಾಷ್ಟ್ರ ಪ್ರಶಸ್ತಿಗಳು ಅವರಿಗೆ ಸಂದಿವೆ. ಚಿನ್ನಸ್ವಾಮಿ ಸೋಸಲೆಯವರು ಸದಾ ಶೋಷಿತರ ಪರ ನಿಲ್ಲುವ ಲೇಖಕ. 

ಎನ್. ಚಿನ್ನಸ್ವಾಮಿ ಸೋಸಲೆ

(20 May 1968)