About the Author

ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್‌ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್‌, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ಸಿರಿ-ವಿನಾಸ, ಸಂಕಥನ ಅಪ್ರಮೇಯ (ಸಂಪಾದಿತ) ಮುಂತಾದವು.

ದಾಮೋದರ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಭಾಷಾ ಸಂಸ್ತೆಯ ಭಾಷಾಭಾರತಿ ಸಮ್ಮಾನ್, ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ಶ್ರೀರಂಗರಂಗ ಪ್ರಶಸ್ತಿ, ರಂಗೋತ್ರಿಯ ಬುದ್ಧ ಪ್ರಶಸ್ತಿ, ಬೆಂಗಳೂರಿನ ನಾಡಚೇತನ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 

ನಾ. ದಾಮೋದರ ಶೆಟ್ಟಿ

(02 Aug 1951)