About the Author

ನಡಹಳ್ಳಿ ವಸಂತ್‌ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್‌ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್‌ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು.

ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್‌ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ 2020ರ ವಿಜ್ಞಾನ ಪ್ರಶಸ್ತಿ ಪುರಸ್ಕೃತ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.) ಸಮರಸದ ದಾಂಪತ್ಯ (ಸಂತೃಪ್ತ ವೈವಾಹಿಕ ಜೀವನದ ಒಳನೋಟಗಳು. ಕರ್ನಾಟಕ ಸಾಹಿತ್ಯ ಅಕಾಡಮಿಯ 2020ರ ದತ್ತಿ ಪ್ರಶಸ್ತಿ ಪುರಸ್ಕೃತ. ಸಿರಿಗನ್ನಡ ಪುಸ್ತಕ ಮನೆ, ಶಿವಮೊಗ್ಗ.) ಜೇಡರ ಕಣಿವೆಯಲ್ಲಿ (ಕೆನೆತ್‌ ಆಂಡರ್ಸನ್‌ ಬೇಟೆಯ ಅನುಭವಗಳ ಸಂಗ್ರಹಾನುವಾದ, ಲಂಕೇಶ್‌ ಪ್ರಕಾಶನ, ಬೆಂಗಳೂರು.),ಕಾಡಿನ ಕಥೆಗಳು (ಕೆನೆತ್‌ ಆಂಡರ್ಸನ್‌ ಅವರ ಮಕ್ಕಳಿಗಾಗಿ ಬರೆದ ಕಥೆಗಳು, ಲಂಕೇಶ್‌ ಪ್ರಕಾಶನ, ಬೆಂಗಳೂರು.), ಶಿವನಪಳ್ಳಿಯ ಕಪ್ಪು ಚಿರತೆ (ಕೆನೆತ್‌ ಆಂಡರ್ಸನ್‌ ಬೇಟೆಯ ಅನುಭವಗಳ ಸಂಗ್ರಹಾನುವಾದ, ಸಿರಿಗನ್ನಡ ಪುಸ್ತಕಮನೆ ಶಿವಮೊಗ್ಗ.), ವ್ಯಾಘ್ರನ ಕರೆ (ಆರ್ಥರ್‌ ಪಾವೆಲ್‌ನ ಬೇಟೆಯ ಅನುಭವಗಳ ಸಂಗ್ರಹಾನುವಾದ. ಸಿರಿಗನ್ನಡ ಪುಸ್ತಕ ಮನೆ ಶಿವಮೊಗ್ಗ.)

ನಡಹಳ್ಳಿ ವಸಂತ್‌