About the Author

ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಾಗಿ ಸದ್ಯ, ಕಲಬುರಗಿಯ ಸರ್ಕಾರಿ ಸ್ವಾತ್ತ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 

ಕೃತಿಗಳು: ನಿಜಶರಣ ಅಂಬಿಗರ ಚೌಡಯ್ಯ, ವಚನಕಾರ ಅಂಬಿಗರ ಚೌಡಯ್ಯ, ಬಂಡಾಯ ವಚನಗಳ ಅಂಬಿಗರ ಚೌಡಯ್ಯ, ಬಂಡಾಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆ, ಜ್ಞಾನಸಿರಿ (ಲೇಖನಗಳ ಸಂಕಲನ), ಜ್ಞಾನ ಸಿಂಚನ (ಲೇಖನಗಳ ಸಂಕಲನ), ಕಲಬುರಗಿ ಜಿಲ್ಲೆ ಸಾಹಿತಿಗಳು, ರಂಗಸಿರಿ, ಸಾಂಸ್ಕೃತಿಕ ಸಾಧಕರು, ಪ್ರಬಂಧ ಸಂಗ್ರಹ, ವಚನಕಾರರ ಆಯ್ದ ವಚನಗಳು, ಚಿಗುರು (ಕವನ ಸಂಕಲನ)   

ಪ್ರಶಸ್ತಿ-ಪುರಸ್ಕಾರಗಳು : ವಿವಿಧ ಸಂಘಟನೆಗಳಿಂದ ಡಿ. ದೇವರಾಜ ಅರಸು ಪ್ರಶಸ್ತಿ, ನಾಡಶ್ರೀ ಪ್ರಶಸ್ತಿ, ಸಾಧನ-ರತ್ನ ಪ್ರಶಸ್ತಿ, ಅವ್ವ ಗೌರವ ಪ್ರಶಸ್ತಿ ಲಭಿಸಿವೆ. ವಿವಿಧ ಸಂಸ್ಥೆ-ಸಂಘಟನೆಗಳು ಆಯೋಜಿಸಿದ್ದ ವಿಚಾರ ಸಂಕಿರಣ, ಶಿಬಿರ, ಸಮ್ಮೇಳನಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. 

ನಾಗಪ್ಪ ಟಿ. ಗೋಗಿ

(27 Jun 1980)