About the Author

ನಟರಾಜು ಎಸ್ ಎಂ ಅವರು ಮೂಲತಃ ಕನಕಪುರ ತಾಲ್ಲೂಕಿನ ಸೀಗೆಕೋಟೆಯವರು. ಪಶುವೈದ್ಯಕೀಯ ಪದವಿಯನ್ನು ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನಿಂದ ಪಡೆದಿದ್ದಾರೆ. ಕೋಲ್ಕತ್ತಾದಲ್ಲಿ ವೆಟರಿನರಿ ಪಬ್ಲಿಕ್ ಹೆಲ್ತ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ Indian Council of Medical Research (ICMR) ದೆಹಲಿಯ ಸೀನಿಯರ್ ರಿಸರ್ಚ್ ಫೆಲೋಶಿಪ್ ಪಡೆದು PhD ಪದವಿ ಸಹ ಪಡೆದಿರುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಎಪಿಡೆಮಿಯಾಲಜಿಸ್ಟ್ ಆಗಿ, ಕರ್ನಾಟಕದಲ್ಲಿ, ಹಾಗು ಭಾರತದ ಪ್ರತಿಷ್ಠಿತ ಸಂಸ್ಥೆಯಾದ ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆ ದೆಹಲಿಯಲ್ಲಿ ಪ್ರಾಣಿಜನ್ಯ ರೋಗಗಳ ತಜ್ಞ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಈಗ ಪ್ರಾದೇಶಿಕ ಸಂಶೋದನಾಧಿಕಾರಿಯಾಗಿ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2012ರಲ್ಲಿ "ಎಲೆ ಮರೆ ಕಾಯಿಗಳ ಜೊತೆ ಮಾತುಕತೆ" ಎಂಬ ಅಂಕಣದ ಮೂಲಕ ಫೇಸ್ ಬುಕ್ ನ ಕನ್ನಡ ಬ್ಲಾಗ್ ಗುಂಪಿನಲ್ಲಿ ಅನೇಕ ಬರಹಗಾರರನ್ನು ಪರಿಚಯಿಸಿರುವ ಇವರು, 2012ರಲ್ಲಿ ಪಂಜು ಅಂತರ್ಜಾಲ ವಾರ ಪತ್ರಿಕೆ ಪ್ರಾರಂಭಿಸಿ ಇಲ್ಲಿಯವರೆಗೆ ಸಾವಿರದ ನೂರಕ್ಕೂ ಹೆಚ್ಚು ಕನ್ನಡದ ಲೇಖಕರ ಬರವಣಿಗೆಗೆ ವೇದಿಕೆ ಒದಗಿಸಿಕೊಟ್ಟಿದ್ದಾರೆ. ಅವಧಿ ಮ್ಯಾಗಜಿನ್ ನಲ್ಲಿ "ನಲ್ಮೆಯಿಂದ ನಟರಾಜು", ಪಂಜು ಪತ್ರಿಕೆಯಲ್ಲಿ "ನಟ್ಟು ಕಾಲಂ" ಅಂಕಣದ ಮೂಲಕ ಓದುಗರಿಗೆ ಪರಿಚಿತರು.

ಕೃತಿಗಳು: ವಂಡರ್‌ ಲ್ಯಾಂಡಿನ ಪುಟ್ಟ ರಾಜಕುಮಾರನೂ, ಖುಷಿ ನಗರಿಯ ಆತನ ನಲ್ಮೆಯ ಗೆಳತಿಯೂ, ಎಲೆ ಮರೆ ಕಾಯಿ

ನಟರಾಜು ಎಸ್ ಎಂ