About the Author

ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರು ಮೂಲತಃ ಧಾರವಾಡದವರು. ಕೊಳಲು ವಾದಕರೆಂದೇ ಪ್ರಸಿದ್ದರು. ಸಂಗೀತ ನಿರ್ಮಾಪಕ ಹಾಗೂ ನಿರ್ದೇಶಕರು. ಟಿ. ವಿ ಧಾರಾವಾಹಿಗಳಿಗೆ, ಬ್ಯಾಲೆ, ಚಲನಚಿತ್ರ, ಮತ್ತು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುತ್ತಾರೆ. ಅವರ ಪ್ಯೂಶನ್ ಆಲ್ಬಮ್ ಗಳು ಪ್ರಸಿದ್ದಿ ಪಡೆದಿವೆ. ‘ರಾಗರಂಜಿನಿ’ ಎಂಬ ರಾಗದ ಆಧಾರದ ಮೇಲೆ ಪ್ರಾಯೋಜಿಸಿದ ‘ಟೆಲಿವಿಶನ್ ಶೋ’ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಅಮೆರಿಕದ ಕೊಳಲು ವಾದಕರ ಸಂಘದಿಂದ ಏರ್ಪಡಿಸಿದ್ದ 5 ದಿನಗಳ ಕೊಳಲು ಸಮ್ಮೇಳನದಲ್ಲಿ ವಿಶ್ವದ ವಿವಿಧ ದೇಶಗಳ ಒಟ್ಟು 125 ಬಾನ್ಸುರಿ ವಾದಕರಲ್ಲಿ ಅವರು ಒಬ್ಬರು. ಅರ್ಜೆಂಟೀನಾ ದಲ್ಲಿ ನಡೆದ ವಿಶ್ವ ಕೊಳಲುವಾದಕರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ.

ಕೃತಿಗಳು: ಪ್ರಹರ

ಪ್ರಶಸ್ತಿ-ಪುರಸ್ಕಾರಗಳು: ಸುರಮಣಿ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, 

ಪಂಡಿತ್ ಪ್ರವೀಣ್ ಗೋಡ್ಖಿಂಡಿ