About the Author

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ಚಂದ್ರರ ನಡುವೆ’ ಅವರ ಕಾದಂಬರಿಗಳು. ’ವೀರ ಪುರುಚ” ನಾಟಕ ರಚಿಸಿದ್ದು, ಹಲವಾರು ಕಥಾ ಸಂಕಲನ, ವಚನ ಕೃತಿಗಳನ್ನು ರಚಿಸಿದ್ದಾರೆ. ’ಯುವ ರತ್ನ ಪ್ರಶಸ್ತಿ, ಯುವ ಚೇತನಾ ಪ್ರಶಸ್ತಿ, ಕಾರಂತ ಪ್ರಶಸ್ತಿ, ಬಸವನಗಿರಿ ಸನ್ಮಾನ, ದಲಿತ ಸಂಘರ್ಷ ಸಮಿತಿ ವಿಶೇಷ ಪುರಸ್ಕಾರ ದೊರೆತಿವೆ. ಸಾಕ್ಷಿಗುಡ್ಡ, ಜೋಗತಿ, ಅನ್ನದ ಕಥೆಗಳು ಮುಂತಾದವು ಇವರ ಇತ್ತೀಚಿನ ಕಥಾಸಂಕಲನಗಳು. 'ಅವಳು ಭೂಮಿಕ', 'ಇಂತಿ ನಿನ್ನಾ ಇಳೆ',  ಇತ್ತೀಚಿಗಿನ ಕಾದಂಬರಿಗಳು. ಇವರ ಸಾಹಿತ್ಯ 'ಬೆಳ್ಳಿ ಹಬ್ಬ' ದ ಪ್ರಯುಕ್ತ 25 ಹೊಸ ಕೃತಿಗಳು ಲೋಕಾರ್ಪಣೆಗೊಳ್ಳಲು ಸಿದ್ಧಗೊಳ್ಳುತ್ತಿವೆ.

ಪೂರೀಗಾಲಿ ಮರಡೇಶಮೂರ್ತಿ

(06 Jun 1966)