About the Author

ಪ್ರವೀಣಾ  ಕುಲಕರ್ಣಿ ಅವರದ್ದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವ. ಕಲೆ, ಸಾಹಿತ್ಯ, ಸಂಗೀತ, ನಾಟಕ, ಕ್ರೀಡೆ, ಕಿರುತೆರೆ, ಚಿತ್ರರಂಗ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ‘ಪರ್ವಿಕ್ ಕನ್ಸಲ್ಟೆಂಟ್ಸ್’ ಸಂಸ್ಥೆಯನ್ನು ಹುಟ್ಟುಹಾಕಿ ಹಲವಾರು ಕ್ರಿಯಾತ್ಮಕ, ಸಂಘಟನಾತ್ಮಕ, ಕೌಶಲ್ಯವರ್ಧಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಬೆಂಗಳೂರು ಆಕಾಶವಾಣಿಗೂ ಧ್ವನಿಯಾಗಿದ್ದು, ಡಿಜಿಟಲ್ ರೇಡಿಯೋದ 'ಜವಾರಿ ಮಾತು' ಕಾರ್ಯಕ್ರಮದಿಂದ ರೇಡಿಯೋ ಜಾಕಿ ಎಂದೆನಿಸಿಕೊಂಡಿದ್ದಾರೆ. ದೂರದರ್ಶನದ ಹಲವಾರು ವಾಹಿನಿಗಳಲ್ಲಿ ನಿರೂಪಕರಾಗಿ, ಸಂದರ್ಶಕರಾಗಿ ಕಾಣಿಸಿಕೊಂಡಿರುವ ಪ್ರವೀಣಾ ಕುಲಕರ್ಣಿ ಚಂದನ ವಾಹಿನಿಯ ‘ಆಹಾ ಎಂಥಾ ರುಚಿ’ ಕಾರ್ಯಕ್ರಮದಿಂದ ಕನ್ನಡಿಗರ ಮನೆಮಾತಾಗಿದ್ದಾರೆ. ಯಶಸ್ವಿ ನಿರೂಪಕಿಯಾಗಿ, ಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರು 2018 ರಲ್ಲಿ ಪರ್ವಿಕ್ ಮೀಡಿಯಾ ಬ್ಯಾನರ್ ಅಡಿಯಲ್ಲಿ "Mr. ಚೀಟರ್ ರಾಮಾಚಾರಿ" ಚಲನಚಿತ್ರವನ್ನು ನಿರ್ಮಿಸಿ ರಾಜ್ಯದಾದ್ಯಂತ ಬಿಡುಗಡೆ ಮಾಡಿರುವ ಇವರು ತಮ್ಮೂರಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಮೊದಲ ನಿರ್ಮಾಪಕಿ ಎನ್ನುವ ಹೆಮ್ಮೆ ಗಳಿಸಿದ್ದಾರೆ.

ರಾಯಚೂರಿನ ಹಿರಿಯ ಸಾಹಿತಿ ವಿ.ಎಸ್.ಕಾಂತನವರನ್ನು ಕುರಿತ ಸಾಕ್ಷ್ಯಚಿತ್ರ 'ಕಾಂತಶ್ರೀ' ಯ ನಿರ್ದೇಶಕಿಯಾಗಿದ್ದಾರೆ. -ಮಿಸೆಸ್ ಇಂಡಿಯಾ ಕರ್ನಾಟಕ 2019ರ ರನ್ನರಪ್ ಆಗಿದ್ದು, ನಗುವೇ ಇವರಿಗೆ ಅಸ್ತ್ರ ಎನ್ನುವುದಕ್ಕೆ ಸಾಕ್ಷಿಯೆಂಬಂತೆ "ಕ್ಲಾಸಿಕ್ ಬೆಸ್ಟ್ ಸ್ಮೈಲ್" ಪುರಸ್ಕಾರ ದೊರೆತಿದೆ. ರೇಡಿಯೋ ಸಿಟಿ ಅವರಿಂದ " -Talented & Multi faceted Personlity" ಪ್ರಶಸ್ತಿಯನ್ನೂ ಗಳಿಸಿದ್ದಾರೆ. "Smruti sadhana ಸಂಸ್ಥೆಯಿಂದ" ನಮ್ಮ ಹೆಮ್ಮೆಯ ಕನ್ನಡಿಗ " 2021 Sudaya foundation ವತಿಯಿಂದ"women icon award 2022"  filmaholic foundation ಹಾಗೂ"ಸಿನೆಮಾಂತರಂಗ" ಮಾಸಿಕ ಪತ್ರಿಕೆಯ ಸಲಹೆಗಾರರಾಗಿದ್ದಾರೆ.

ಪ್ರಸ್ತುತ ಸಂಸ್ಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ. ಹಾಗೇ ವಿನೂತನವಾದ "ಅನುಭವದ ಅಡುಗೆ" ಎಂಬ ಕ್ಕತಿ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಅದರಲ್ಲಿ ಚಂದನ ವಾಹಿನಿಯ ಆಹಾ ಎಂಥಾ ರುಚಿ ಕಾರ್ಯಕ್ರಮದ ಪಯಣದಲ್ಲಿ ತಮಗಾದ ಅನುಭವಗಳ ಬುತ್ತಿಯನ್ನು ಉಣಬಡಿಸುತಿದಾರೆ. 

ಪ್ರವೀಣಾ ಕುಲಕರ್ಣಿ