About the Author

ಸಾಹಿತಿ ಪ್ರೇಮಾ ಕಾರಂತ ಅವರು ಚಲನಚಶೀಲ ಕನ್ನಡದ ಪ್ರಸಿದ್ಧ ರಂಗಕರ್ಮಿ ಹಾಗೂ ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ.  ಅವರು ರಾಷ್ಟ್ರೀಯ ನಾಟಕ ಶಾಲೆಯ ಡಿಪ್ಲೊಮಾ ಅಧ್ಯಾಪಕಿ, 1936 ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಜನಿಸಿದರು. ಪ್ರಸಿದ್ಧ ರಂಗಕರ್ಮಿ - ನಾಟಕ ನಿರ್ದೇಶನ, ವಸ್ತ್ರವಿನ್ಯಾಸ ಮತ್ತು ಮಕ್ಕಳ ರಂಗಭೂಮಿಯಲ್ಲಿ ವಿಶೇಷ ಪರಿಣತಿ, ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನಿಂದ ಭಾಷಾಂತರಕಾರರಾಗಿ ಅಂಗೀಕೃತರಾಗಿದ್ದರು. ’ಕುರುಡು ಕಾಂಚಾಣ, ಸ್ವಾರ್ಥಿ ದೈತ್ಯ, ಗುಜರಾತಿ ಏಕಾಂಕಗಳು, ಹಕ್ಕಿ ಹಾರುತಿದೆ ನೋಡಿದಿರಾ, ನಾವೂ ನಾಟಕ ಆಡೋಣ ಬನ್ನಿ, ಕುಣಿಯೋ ಕತ್ತೆ’ ಹಿಂದಿ ಮತ್ತು ಇಂಗ್ಲೀ‌ಷ್‌ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. “ಸೋಲಿಸಬೇಡ ಗೆಲಿಸಯ್ಯ” ಅವರ ಆತ್ಮಕಥೆಯು ಸಹ ಪ್ರಕಟವಾಗಿದೆ.

"ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, 'ಫಣಿಯಮ್ಮ' ಚಿತ್ರ ನಿರ್ದೇಶನಕ್ಕೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳು. ಚಮನಲಾಲ್ ಪ್ರಶಸ್ತಿಗಳು ಲಭಿಸದೆ ಅವರಿಗೆ. ಜರ್ಮನಿ ಮ್ಯಾನ್‌ಹಾಂ ಚಲನಚಿತ್ರೋತ್ಸವದ ಜೂರಿ ಸದಸ್ಯೆ, ಕೇರಳ ರಾಜ್ಯಪ್ರಶಸ್ತಿ ಸಮಿತಿ ಅಧ್ಯಕ್ಷೆ, ಕೇಂದ್ರ ಸಾಕ್ಷ್ಯಚಿತ್ರಗಳ ಪ್ರಶಸ್ತಿ ಸಮಿತಿ ಅಧ್ಯಕ್ಷೆಯಾಗಿದ್ದರು. ಕನ್ನಡದ ಪ್ರಮುಖ 10 ನಾಟಕಗಳ ನಿರ್ಮಾಣ. 17 ಮಕ್ಕಳ ನಾಟಕಗಳ ನಿರ್ದೇಶನ, 120ಕ್ಕೂ ಹೆಚ್ಚು ನಾಟಕಗಳಿಗೆ, 8 ಚಲನಚಿತ್ರಗಳಿಗೆ ವಸ್ತ್ರವಿನ್ಯಾಸ, 7 ಸಾಕ್ಷ್ಯಚಿತ್ರಗಳ ನಿರ್ಮಾಣ, 5 ಚಲನಚಿತ್ರಗಳ ನಿರ್ದೇಶನ, ಸುಮಾರು 11 ನಗರ, ಮಹಾನಗರಗಳಲ್ಲಿ ನಾಟಕ ಶಿಬಿರಗಳ ನಿರ್ವಹಣೆ, ಕೇಂದ್ರ ಸರಕಾರದ ಯೋಜನೆ"ಗಳನ್ನು ನಿರ್ವಹಿಸಿದ್ದಾರೆ. 

ಪ್ರೇಮಾ ಕಾರಂತ

(15 Aug 1936)