About the Author

ಶತಾವಧಾನಿ ಗಣೇಶ್ ಎಂದೇ ಖ್ಯಾತರಾಗಿರುವ ಆರ್. ಗಣೇಶ್ ಅವರು 1962 ಫೆಬ್ರುವರಿ 14ರಂದು ಕೋಲಾರದಲ್ಲಿ ಜನಿಸಿದರು. ತಾಯಿ ಅಲಮೇಲಮ್ಮ, ತಂದೆ ಶಂಕರನಾರಾಯಣ. ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಸಂಸ್ಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನ್ನಡದಲ್ಲಿ ಡಿಲಿಟ್‌ ಪದವಿ ಪಡೆದಿದ್ದಾರೆ. ಸುಮಾರು ಹನ್ನೆರಡು ಭಾಷೆ ಪರಿಣಿತಿ ಹೊಂದಿದ್ದಾರೆ. 

ಗಣೇಶ್‌ ಅವರು ಬರೆದ ಕೃತಿಗಳೆಂದರೆ ವಿತಾನ (ಕವನ ಸಂಕಲನ), ಶತಾವಧಾನಶಾರದೆ, ಧೂಮದೂತ (ವಿಡಂಬನ ಕಾವ್ಯ), ವಂಶೀಸಂದೇಶ (ಹಳಗನ್ನಡಕಾವ್ಯ), ದೃಷ್ಟಾಂತ ಕಲಿಕಾ ಶತಕ ಮತ್ತು ಶಾಂತಿ ವಿಲಾಸ (ಅನುವಾದ). ವಿಭೂತಿ ಪುರುಷ ವಿದ್ಯಾರಣ್ಯ (ಸಂಶೋಧನೆ), ದ್ರಾವಿಡ ಛಂದಸ್ಸು (ಸಂಪಾದನೆ) ಮುಂತಾದವು. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್‌ ಭಾಷೆಯಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ದಸರಾ ಪ್ರಶಸ್ತಿ ಲಭಿಸಿದೆ. ಸುಮಾರು24 ಗಂಟೆ ಕಾಲ ಆರು ಕವಿತೆ ರಚಿಸಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ.

ಆರ್. ಗಣೇಶ್

(14 Feb 1962)

Comments