About the Author

ಗಜಲ್‌ ಕವಯತ್ರಿ ರೇಖಾ ಭಟ್ಟ ಅವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೊನ್ನಗದ್ದೆಯವರು. ಪ್ರಾಥಮಿಕ ಶಾಲಾ ಶಿಕ್ಷಕಿ. ಅವರು ಹುಟ್ಟಿದ್ದು 30-07-1986. ಅವರ ಚೊಚ್ಚಲ ಗಜಲ್‌ ಸಂಕಲನ ’ಮಡಿಲ ನಕ್ಷತ್ರ” . ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರೆಹಗಾರರ ಚೊಚ್ಚಲ ಕೃತಿಗೆ ಧನಸಹಾಯ ಯೋಜನೆಯಲ್ಲಿ ಪ್ರಕಟವಾಗಿದೆ.  ಕವಿಬಳಗ ನಡೆಸಿದ ಧ್ವನಿಸುರುಳಿ ತಯಾರಿಕೆಗಾಗಿ ಭಾವಗೀತೆ ರಚನೆ ಸ್ಪರ್ಧೆ ನಡೆಸಿದ್ದು, ಅವರ 'ನೀನಿರದ ಬದುಕು' ಎನ್ನುವ ಭಾವಗೀತೆ ಧ್ವನಿ ಸುರಳಿಯಲ್ಲಿ ಬಳಕೆಯಾಗಿದೆ. ಅವರ ಕವಿತೆಗಳು ಕನ್ನಡದ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ‌.

ರೇಖಾ ಭಟ್ಟ

(30 Jul 1986)