About the Author

ಎಸ್. ಎನ್. ಸೇತುರಾಂ ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ಶಂಕ ಗ್ರಾಮದಲ್ಲಿ. 1953ರ ಜನೆವರಿ 23 ರಂದು ಜನನ. ಬಿ.ಎಸ್.ಸಿ ಪದವೀಧರರು. ರಷ್ಯನ್ ಸಾಹಿತ್ಯ ಕುರಿತು ಹೆಚ್ಚಿನ ಓದು. ಅಂಚೆ ಇಲಾಖೆಯಲ್ಲಿ ಸೇವೆ, 1976 ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ, 2007  ರಲ್ಲಿ ಡೆಪ್ಯೂಟಿ ಕಮೀಷನರಾಗಿ ಸ್ವಯಂ ನಿವೃತ್ತಿ ಪಡೆದರು. ನಂತರ ಆದಾಯ ತೆರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1981 ರಿಂದ ಹವ್ಯಾಸಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾದರು. ಮಾಯಾಮೃಗ, ಮನ್ವಂತರ, ಮುಕ್ತ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಂಥನ, ದಿಬ್ಬಣ ಮತ್ತು ಅನಾವರಣ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ

.ನಿಮಿತ್ತ, ಗತಿ, ಅತೀತ-ನಾಟಕಗಳು. 'ನಿಮಿತ್ತ' ನಾಟಕವು ಗುಲಬರ್ಗಾ ವಿ.ವಿ. ಯಲ್ಲಿ ದ್ವಿತೀಯ ಪದವಿ ತರಗತಿಗೆ ಪಠ್ಯವಾಗಿದೆ. ನಾವಲ್ಲ (2017) ಹಾಗೂ ದಹನ (2018) ಕಥಾ ಸಂಕಲನಗಳು. 'ನಾವಲ್ಲ' ಕಥಾ ಸಂಕಲನವು ಆರು ಮುದ್ರಣ ಕಂಡು 'ಮಾಸ್ತಿ ಕಥಾ ಪುರಸ್ಕಾರ' ಪಡೆದಿದೆ.

 

ಎಸ್.ಎನ್. ಸೇತುರಾಂ

(23 Jan 1953)

Awards