About the Author

ಸಮುದ್ರವಳ್ಳಿ ವಾಸು ಅವರು ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ವಾಟೆಹೊಳೆ ಬಳಿಯ ಸಮುದ್ರವಳ್ಳಿಯವರು. ತಂದೆ ಕೃಷ್ಣಗೌಡ, ತಾಯಿ ಕಮಲಮ್ಮ. ಪಿಯುಸಿವರೆಗೆ ಓದು. ವಿದ್ಯುತ್ ಇಲಾಖೆಯಲ್ಲಿ ವೃತ್ತಿ ಪ್ರಾರಂಭಿಸಿ, ಸದ್ಯ, ಕೆ.ಹೊಸಕೋಟೆ ವಿದ್ಯಾತ್ ಇಲಾಖೆಯಲ್ಲಿ ಲೈನ್ ಮ್ಯಾನ್ ಆಗಿ  (ಮಾರ್ಗದಾಳು) ಕೆಲಸ ಮಾಡುತ್ತಿದ್ದಾರೆ. ಲೇಖನ, ಕಥೆ, ನಾಟಕ, ಕವಿತೆ, ವಿಮರ್ಶೆ, ಚುಟುಕು ಇತ್ಯಾದಿ  ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. 

ಕೃತಿಗಳು: ಸಿಹಿ ಮುತ್ತು (ಚುಟುಕು ಸಂಕಲನ), 'ಯಡವಟ್ಟು ವಾಸು (ಹಾಸ್ಯ ಸಂಕಲನ), ಮಕ್ಕಳ ಕಿರು ನಾಟಕಗಳು (ನಾಟಕ), ಹುಚ್ಚುಡ್ಡಿ (ಕಥಾ ಸಂಕಲನ), ಢಣ ಢಣ ಘಂಟೆ ಬಾರಿಸಿತು (ಮಕ್ಕಳ ಕವನಸಂಕಲನ), ಮಲೆನಾಡಿನ ಮಾರ್ಗದಾಳುಗಳು (ಕಾದಂಬರಿ), ನನ್ನಾಕೆ ಹೇಳಿ, ಉಂಡಾಡಿ ಗುಂಡ, ಅಂತರಂಗ ಅಳು (ಮಕ್ಕಳ ಕವನಗಳು), ಸಿಂಗಾರಿ (ಮಕ್ಕಳ ಕಥನ ಕವನಗಳು)

ಪ್ರಶಸ್ತಿ-ಪುರಸ್ಕಾರಗಳು:  ಸಿಹಿಮುತ್ತು ಕೃತಿಗೆ  (2014) ಕುವೆಂಪು ಸಾಹಿತ್ಯ ಪ್ರಶಸ್ತಿ, 

 

ಸಮುದ್ರವಳ್ಳಿ ವಾಸು

(10 Jul 1982)