About the Author

ಸತ್ಯಪ್ಪ ಭೀ ಮಾಳಗೊಂಡ ಅವರು ಮೂಲತಃ ಬಾಗಲಕೋಟೆಯವರು. ಪದವಿ ಪೂರ್ವ ಹಾಗೂ ಪದವಿ ಶಿಕ್ಷಣಗಳನ್ನು ಜಮಖಂಡಿಯಲ್ಲಿ ಪೂರೈಸಿದ್ದಾರೆ. ಬಳಿಕ, ಪಿಎಸ್ಐ ಹುದ್ದೆಗೆ ಆಯ್ಕೆಯಾಗಿ ಕಾರ್ಕಳ, ಹೇಬ್ರಿ, ಶಂಕರನಾರಾಯಣ, ಅಥಣಿ, ವಿಜಯಪುರ, ಮುದ್ದೇಬಿಹಾಳ, ಆಲಮೆಲ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ನಂತರ 2016ರಲ್ಲಿ ಸಿಪಿಐ ಆಗಿ ಪದೋನ್ನತಿಯನ್ನು ಪಡೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಸೈಬರ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬೆಳಗಾವಿಯ ನಂದಗಡದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ.

ಎಸ್.ಬಿ. ಮಾಳಗೊಂಡ

(01 Jun 1980)

Books by Author