About the Author

ಸಾಹಿತಿ ಶಂಕರ ಮಲ್ಲಪ್ಪ ಬೈಚಬಾಳ ಅವರು ಬಿಜಾಪುರ ಜಿಲ್ಲಾ ಬಸವನ ಬಾಗೇವಾಡಿ ತಾ, ಮಸಬಿನಾಳದಲ್ಲಿ 1966 ಜುಲೈ 22ರಂದು ಜನಿಸಿದರು. ಜಾನಪದ ಗಾಯಕ, ಚಿತ್ರಕಲಾವಿದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಜಾನಪದ, ಐತಿಹಾಸಿಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥೆ, ಕವಿತೆ, ವಿಮರ್ಶೆ, ಚುಟುಕಗಳು ಇತರರ ಸಂಕಲನಗಳಲ್ಲಿಯೂ ಸೇರಿವೆ. ಪುಣೆಯ ಯಂಗ್ ಸ್ಟಾರ್ ಅಸೋಸಿಯೇಷನ್‌ದ ಕನ್ನಡ ಕಾರ್ಯಕ್ರಮದಲ್ಲಿ ಮೈಸೂರಿನ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬೇರೆ, ಬೇರೆ ಬಾನುಲಿ ಕೇಂದ್ರಗಳಿಂದ  ಭಾಷಣಗಳು ಪ್ರಸಾರವಾಗಿವೆ.

ಇವರ ಪ್ರಮುಖ ಕೃತಿಗಳೆಂದರೆ ಶತಾಯುಷಿ ಸೊನ್ನದ ಶಿವಾನಂದ ಅಪ್ಪಗಳು, ವಚನ ಮಾಂಗಲ್ಯ, ಅದೇನ ಕಾಗದಂತಿ, ಭೀಮಾರಥಿ, ರಾಜಗುರು, ಸೈತಾನ ಇತ್ಯಾದಿ. ಇವರಿಗೆ ಉತ್ತರ ಕರ್ನಾಟಕ ಶ್ರೇಷ್ಠ ಸಾಹಿತಿ ಪ್ರಶಸ್ತಿ, ರಾಜ್ಯ ಚುಟುಕು ಸಾಹಿತ್ಯ ಪರಿಷತ್ 'ಚುಟುಕುಶ್ರೀ' ಪ್ರಶಸ್ತಿ, ಮುಂಬೈನ ಅಮೂಲ್ಯ ಕಥಾ ಪ್ರಶಸ್ತಿ, ಹಾಗೂ ಕುವೆಂಪು ಜನ್ಮಶತಮಾನೋತ್ಸವ ನಿಮಿತ್ತ 'ಕುವೆಂಪು ಶ್ರೀ' ಪ್ರಶಸ್ತಿ ಲಭಿಸಿವೆ. 

ಶಂಕರ ಮಲ್ಲಪ್ಪ ಬೈಚಬಾಳ

(22 Jul 1966)