About the Author

ಕವಯತ್ರಿ, ಲೇಖಕಿ ಶಾಂತಲಾ ಭಂಡಿ ಅವರು ಮೂಲತಃ ಶಿರಸಿ ತಾಲೂಕಿನ ಬೆಂಗಳೆಯವರು. ಪ್ರಸ್ತುತ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದು, ಟೆಕ್ನಿಕಲ್ ರಿಕ್ರೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಕತೆ-ಕವನ, ಪ್ರಬಂಧ, ಲಹರಿ, ಲೇಖನಗಳು ಕನ್ನಡ ಪತ್ರಿಕೆ ಹಾಗೂ ಅಂತರ್ಜಾಲದಲ್ಲೂ ಪ್ರಕಟವಾಗಿವೆ. ಇವರ ಬ್ಲಾಗ್ ’ನೆನಪು ಕನಸುಗಳ ನಡುವೆ’.

 ಕೃತಿಗಳು: ಬೊಗಸೆಯಲ್ಲಿ ಬೆಳದಿಂಗಳು (ಕವನ ಸಂಕಲನ-2010), ಬೆಳದಿಂಗಳ ಬೇರು (ಪ್ರಬಂಧ/ಲಹರಿ ಗುಚ್ಛ -2012)

ಶಾಂತಲಾ ಭಂಡಿ