About the Author

ಲೇಖಕ ಶರಣಗೌಡ ಪಾಟೀಲರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದವರು. ತಂದೆ ಈಶ್ವರಪ್ಪಗೌಡ, ತಾಯಿ ಕಮಲಮ್ಮ, ಎಂ.ಎ ಹಾಗೂ ಎಂ.ಕಾಂ. ಪದವೀಧರರು. ಜೇವರ್ಗಿಯಲ್ಲಿ ನಿರಂಜನ ಪ್ರಕಾಶನ (2007) ಸ್ಥಾಪಿಸಿದರು. ರಂಗಂಪೇಟೆಯ ಬರಹಗಾರರ ಬಳಗದ ಕಾರ್ಯದರ್ಶಿ, ಸುರಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವಲಯ ಅಧ್ಯಕ್ಷರು, ರಂಗಪೇಟೆಯ ಕನ್ನಡ ಸಾಹಿತ್ಯ ಸಂಘದ ಸದಸ್ಯರು, ಮಕ್ಕಳ ಸಾಹಿತ್ಯ ಪರಿಷತ್ತು(ಜೇವರ್ಗಿ) ಉಪಾಧ್ಯಕ್ಷರು, ಗುಲಬರ್ಗಾ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿವೆ. ಜೇವರ್ಗಿ ತಾಲೂಕು 5ನೇ ಶರಣ ಸಾಹಿತ್ಯ (2021) ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸದ್ಯ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಇವರ ಲೇಖನಗಳು, ವ್ಯಕ್ತಿಪರಿಚಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

ಕೃತಿಗಳು: ಅಪ್ಪ( ದಿ ಗ್ರೇಟ್) ಮತ್ತು ಇತರೆ ಲೇಖನಗಳು, ಮೌನ ಮಾತಾದಾಗ (ಕವನ ಸಂಕಲನ), ಮಾತು ಮೌನದ ಮಧ್ಯೆ (ಕವನ ಸಂಕಲನ), ಚುಟುಕು-ಚಟಾಕಿ (ಚುಟುಕುಗಳು), ಕಾಮರ್ಸ್ ದಿ ವೇ ಆಫ್ ಲೈಫ್ (ಶಬ್ದಕೊಶ), ಅಂತರಂಗದ ಮೃದುಂಗ (ಕಾವ್ಯ ಸಂಕಲನ), ವಚನೋತ್ಸವ (ಆಧುನಿಕ ವಚನಗಳು),, ಸಗರನಾಡಿನ ಸಪ್ತ ಶರಣರು. 

ಪ್ರಶಸ್ತಿ-ಪುರಸ್ಕಾರಗಳು: ರಾಯಚೂರಿನ ಕಲಾಸಂಕುಲ ಸಂಸ್ಥೆಯಿಂದ ‘ಶಿಕ್ಷಕ ರತ್ನ’ ಪ್ರಶಸ್ತಿ, ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದಿಂದ ‘ಸಗರನಾಡು ಕಲಾಬಂಧು’ ಪ್ರಶಸ್ತಿ, ಯಾದಗಿರಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ 2019-20 ‘ಅತ್ಯುತ್ತಮ ಉಪನ್ಯಾಸಕ’ ಪುರಸ್ಕಾರ, ಲಭಿಸಿದೆ. 

ಶರಣಗೌಡ ಪಾಟೀಲ, ಜೈನಾಪುರ

(01 Jun 1969)