About the Author

ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್‌ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ. 

ಶ್ರೀನಿವಾಸ ಜೋಕಟ್ಟೆ