About the Author

ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ  ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ಸಮಸ್ಯೆಗಳು,ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣು ಮಕ್ಕಳ ಶಿಕ್ಷಣ,ಭ್ರೂಣ ಹತ್ಯೆಯಂತಹ ಪ್ರಸ್ತುತ ವಿಚಾರದ ಬಗ್ಗೆ, ಸರಳ ವಿವಾಹ,ಹೆಣ್ಣು ಮಕ್ಕಳ ಸಬಲೀಕರಣ ಹೀಗೆ ಹಲವಾರು ಗಂಭೀರ ವಿಚಾರಗಳ ಬಗ್ಗೆ ಕಾದಂಬರಿಯ ವಸ್ತುವಾಗಿಸಿ ಬರೆದಿರುವ ಶೈಲಜಾ ಹಾಸನ ಅವರ ಸಾಹಿತ್ಯ, ಸಮಾಜವನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಕೃತಿಗಳು: 1.ಚಿಲ್ಲರೆ ಪುರಾಣ(ಹಾಸ್ಯ ಸಂಕಲನ), 2. ಮತ್ತೊಂದು ಅಂಗಳ(ಕಥಾ ಸಂಕಲನ),3. ಬೊಗಸೆಯೊಳಗಿನ ಬಿಂದು (ಕವನ ಸಂಕಲನ),4. ಮಂಥನ(ಕಾದಂಬರಿ),5.ಶಿಕ್ಷಣದತ್ತ ಒಂದು ನೋಟ( ಲೇಖನಗಳು),6.ಮುಸ್ಸಂಜೆಯ ಮಿಂಚು(ತರಂಗ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದಕಾದಂಬರಿ),7.ಇಳಾ( ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ),8. ದರ್ಪಣ(ಕಥಾಸಂಕಲನ), 9.ಮೌನಮೀರಿದ ಹೊತ್ತು( ಅಂಕಣ ಬರಹಗಳ ಸಂಕಲನಗಳು), 10.ಮೋಹ( ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ),11. ಮಕ್ಕಳ ಕಥಾಗುಚ್ಛ(ಸಂಪಾದಿತ ಸಂಕಲನ), 12.ಹಿಂದಿನ ಬೆಂಚಿನ ಹುಡುಗಿಯರು(ಕಥಾಸಂಕಲನ), 13.ಏನೊ ದಾಹ ಏನೊ ಮೋಹ( ಸುಧಾ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾದ ಕಾದಂಬರಿ), 14. ಬದುಕಿನ ಬೊಗಸೆಯೊಳಗೆ(ಅಂಕಣ ಬರಹಗಳ ಸಂಗ್ರಹ), 15. ಅಂತರ (ಕಾದಂಬರಿ), 16..ಸಿನಿಮಾ ಟಾಕೀಸು(ಪ್ರಬಂಧಗಳ ಸಂಕಲನ), 17. ಸವಾರಿಗಳು(ಪ್ರಬಂಧಗಳ ಸಂಕಲನ)18. ನಕ್ಸಲೈಟ್(ಕಥಾಸಂಕಲನ), 19..ಹೋರಾಟದ ಹಾದಿಯಲ್ಲಿ ಬೆಳ್ಳಿ ಹೆಜ್ಜೆ(ಸಂಪಾದಿತ ಕೃತಿ), 20.ಮಕ್ಕಳ ಸಾಹಿತ್ಯ (ಸಂಪಾದಿತಕೃತಿ), 21.ನೆರೆಹೊರೆ(ಲೇಖನಗಳು ಸಂಗ್ರಹ)

ಪ್ರಶಸ್ತಿಗಳು:  "ತ್ರೀವೇಣಿ ಸಾಹಿತ್ಯ ಪ್ರಶಸ್ತಿ' ಮೋಹ ಕಾದಂಬರಿಗೆ, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು., ಭಾರತಿ ರಾಜರಾವ್ ಮಧ್ಯಸ್ತ ದತ್ತಿ ಪ್ರಶಸ್ತಿ( ಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು), ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಬೆಂಗಳೂರು.,ಮಾಳಗಿ ಮಾಲತೇಶ್ವರ ಪ್ರಶಸ್ತಿ, ಹಾವೇರಿ, ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯಪ್ರಶಸ್ತಿ, ಬೆಂಗಳೂರು, ಗೌರಿರಾಮಯ್ಯ ದತ್ತಿ ಪ್ರಶಸ್ತಿ(ಭಾರತೀಯ ಕರ್ನಾಟಕ ಸಂಘ, ಬೆಂಗಳೂರು), ಉಮಾದೇವಿ ಶಂಕರರಾವ್ ದತ್ತಿ ಬಹುಮಾನ( ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು), ರಾಘವೇಂದ್ರ ಪ್ರಕಾಶನ, ಅಂಕೋಲ ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನ, ಮಲ್ಲಿಗೆ ಕಥಾ ಬಹುಮಾನ, ಈ ಭಾನುವಾರ ಪತ್ರಿಕೆಯ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಬಹುಮಾನ,  ಲೇಖಕಿಯರ ಟ್ರಸ್ಟ್ ಮೈಸೂರು, ರಾಜ್ಯ ಮಟ್ಟದ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ,  ಕರ್ನಾಟಕ ಲೇಖಕಿಯರ ಸಂಘದ ಉಮಾದೇವಿ ಶಂಕರರಾವ್ ದತ್ತಿ ಬಹುಮಾನ "ನಕ್ಸಲೈಟ್" ಕಥೆಗೆ, ರಾಮಸ್ವಾಮಿ ಅಯ್ಯಂಗಾರ್ ಸಾಾಹಿತ್ಯ ಪ್ರಶಸ್ತಿ,ಸಾಾಹಿತ್ಯ ಪರಿಷತ್ತು,ಹಾಸನ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಬೆಂಗಳೂರು. "ಮೌನ ಮೀರಿದ ಹೊತ್ತು" ಕೃತಿಗೆ, ಅನನ್ಯ ಪ್ರಕಾಶನ ಪುಸ್ತಕ ಪ್ರಶಸ್ತಿ, ಬೆಂಗಳೂರು." ಏನುಮೋಹ ಯಾವ ದಾಹ"ಕೃತಿಗೆ, ಡಾ:ಕರೀಂಖಾನ್ ಸಾಹಿತ್ಯ ಪ್ರಶಸ್ತಿ,ಕೇಂದ್ರ ಸಾಹಿತ್ಯ ವೇದಿಕೆ ,ಬೆಂಗಳೂರು,  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತು,ಹಾಸನ, ಬಂದಮ್ಮ ಸಿದ್ದರಾಮಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ, ಜಿಲ್ಲಾ ಲೇಖಕಿಯರ ಬಳಗ,ಹಾಸನ, "ಕನ್ನಡರತ್ನ" ಪ್ರಶಸ್ತಿ ,ವಚನ ಸಾಹಿತ್ಯ ಪರಿಷತ್ತು, ಬೆಂಗಳೂರು, ವಿಶಿಷ್ಟಲೇಖಕಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು, ಸಾಹಿತ್ಯಶ್ರಿ ಪ್ರಶಸ್ತಿ, ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ, ರಾಯಚೂರು. 

 

ಶೈಲಜಾ ಹಾಸನ

(15 May 1964)