About the Author

ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ವಿಚಾರವಾದಿ ವಿದ್ಯಾಸಮ್ಮೇಳನ (1933) ಅಧ್ಯಕ್ಷರಾಗಿದ್ದ ಇವರು ದಲಿತ ಸಂಘರ್ಷ ಸಮಿತಿ (1975) ಹುಟ್ಟು ಹಾಕಿದರು. ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಸಕ್ರಿಯವಾಗಿ ಪಾತ್ರವಹಿಸಿದ್ದಾರೆ.

ಇವರ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಅವುಗಳಲ್ಲಿ ಕೆಲವು ಹೀಗಿವೆ: ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (1986) ಚಲನಚಿತ್ರ ಗೀತರಚನೆ ಪ್ರಶಸ್ತಿ (1984) ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1996) ಜಾನಪದ ತಜ್ಞ ಪ್ರಶಸ್ತಿ (2001) ಸಂದೇಶ ಪ್ರಶಸ್ತಿ (2001) ಡಾ. ಅಂಬೇಡ್ಕರ್ ಪ್ರಶಸ್ತಿ (2002) ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ (2002) ನಾಡೋಜ ಪ್ರಶಸ್ತಿ (2007) ಆಳ್ವಾಸ್ ನುಡಿಸಿರಿ ಪ್ರಶಸ್ತಿ (2012) ಪ್ರೆಸಿಡೆನ್ಸಿ ಇನ್ಸಿಟ್ಯೂಷನ್ ಪ್ರಶಸ್ತಿ (2012) ಇತ್ಯಾದಿ ಪ್ರಶಸ್ತಿಗಳು ಬಂದಿವೆ.

ಕವಿ, ವಿಮರ್ಶಕರಾದ ಸಿದ್ಧಲಿಂಗಯ್ಯ ಅವರ ಕೃತಿಗಳು: ಅವುಗಳಲ್ಲಿ ಕೆಲವು: ಗ್ರಾಮದೇವತೆಗಳು (ಸಂಶೋಧನ ಪ್ರಬಂಧ), ಊರುಕೇರಿ (ಆತ್ಮಕಥೆ) ಜನಸಂಸ್ಕೃತಿ, ಉರಿಕಂಡಾಯ, ಹಕ್ಕಿನೋಟ, ಪಂಚಮ ಮತ್ತು ನೆಲಸಮ, ಏಕಲವ್ಯ (ನಾಟಕ), ಸಾವಿರಾರು ನದಿಗಳು (1979), ಕಪ್ಪು ಜನರ ಹಾಡು (1982), ಹೊಲೆಮಾದಿಗರ ಹಾಡು (1975) ಇತ್ಯಾದಿ.

ಸಿದ್ಧಲಿಂಗಯ್ಯ

(03 Feb 1954)