About the Author

ಸುಪ್ರೀತ್ ಕೆ.ಎನ್ ಮೂಲತಃ ಬೆಂಗಳೂರಿನವರು. 1991 ಅಕ್ಟೋಬರ್‍ 4 ರಂದು ಜನಿಸಿದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ  ಅವರು ವಾಹಿನಿಯೊಂದರ ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲೇ ’ಕಾದಂಬರಿ’, ಸ್ಟ್ಯಾಪಿಂಗ್ ಮತ್ತು ಮಂದಿರ ಮಸೀದಿ ಕಾದಂಬರಿಗಳನ್ನು ರಚಿಸಿದ್ದ ಸುಪ್ರೀತ್, ನಂತರದ ದಿನಗಳಲ್ಲಿ ತರ್ಕ ಮತ್ತು ಸಾವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮ, ತತ್ವಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಲ್ಲಿ ಇವರಿಗೆ ಅಪಾರವಾದ ಆಸಕ್ತಿ. ಇವರು ಅವರ ಕಾದಂಬರಿಗಳಲ್ಲಿ ಈ ತಲೆಮಾರಿನ ಹುಡುಗ ಹುಡುಗಿಯರ ಮುಂದುವರೆದ ಜೀವನ ಭಾಗವನ್ನು ತೆರೆದಿಡುತ್ತಿದ್ದಾರೆ. ತರ್ಕ ಕಾದಂಬರಿಯಲ್ಲಿ ಶ್ರೀಚಕ್ರ ಯಂತ್ರ, ಫಿಸಿಕ್ಸ್, ಮಂತ್ರಗಳ ಹಿಂದಿರುವ ವಿಜ್ಞಾನ, ಅವು ನಮ್ಮ ದೇಹ ಮನಸ್ಸುಗಳ ಮೇಲೆ ಬೀರುವ ಪ್ರಭಾವಗಳ ಕುರಿತು ವಿಶ್ಲೇಷಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಇವರ 'ಸಾವು' ಕಾದಂಬರಿಯಲ್ಲಿ ವಿಧವೆಯೊಬ್ಬಳ ತೊಳಲಾಟವನ್ನು ಸೂಕ್ಷ್ಮವಾಗಿ ಚಿತ್ರಿಸುವುದರ ಜೊತೆಗೆ ಪಂಚಪ್ರಾಣಗಳು, ದೇಹದಲ್ಲಿ ಅವುಗಳ ಕೆಲಸ, ಯೋಗ ಶಕ್ತಿಯಿಂದ ಪ್ರಾಣವನ್ನು ಬಿಡುವ ಯೋಗಿಗಳ ವರ್ಣನೆಯನ್ನು ಮಾಡಿದ್ದಾರೆ. 

ಸುಪ್ರೀತ್ ಕೆ ಎನ್

(04 Oct 1991)

BY THE AUTHOR