About the Author

ಲೇಖಕಿ, ಅನುವಾದಕಿ, ಪತ್ರಕರ್ತೆ ಹಾಗೂ ಸಾಹಿತಿ ಮಾತ್ರವಲ್ಲದೆ ಸಮಾಜ ಕಾರ್ಯದಲ್ಲೂ ತೊಡಗಿರಿವ ವಿ. ಗಾಯತ್ರಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದವರು. ಅವರ ‘ತುಂಗಾ’ ಮಕ್ಕಳ ಸೃಜನಶೀಲ ಕಾದಂಬರಿ 7ನೇ ತರಗತಿಗೆ ಪಠ್ಯವಾಗಿದೆ. ಡಿ.ಡಿ.ಭರಮಗೌಡ್ರ ಬದುಕು- ಬೇಸಾಯ, ತೊತ್ತೋ ಚಾನ್- ವಿಶ್ವ ವಿಖ್ಯಾತ ಜಪಾನಿ ಕಾದಂಬರಿಯ ಕನ್ನಡ ಅನುವಾದ, ಸಾವಯವ ಪರಂಪರೆಯ ಕಥನ ಭಾಗ 1, 2,3 ಮತ್ತು 4 – ಸಹಜ/ಸಾವಯವ ರೈತರ ಕೃಷಿ ಮತ್ತು ಬದುಕುಗಳು (28 ಕಥನಗಳ ಸಂಗ್ರಹ)- ದಾಖಲಿಸಿ ನಿರೂಪಿಸಿದ ಕೃತಿಗಳು.  

‘ಪುಟ್ಟೀರಮ್ಮನ ಪುರಾಣ’, ‘ತೆರೆಮರೆಯ ಸತ್ಯಕಥೆ’, ‘ಸಾವಯವ ಸಂಗತಿ’ ಅವರ ಪ್ರಮುಖ ಕೃತಿಗಳು. ‘ಕೌಂಟರ್ ಮೀಡಿಯಾ’ ಪ್ರಶಸ್ತಿ, ಧಾರವಾಡದ ‘ಪರ್ಯಾಯ ಕೃಷಿ ಮಾಧ್ಯಮ’ದ ರಾಜ್ಯಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ, ಅವರ ಡಿ.ಡಿ.ಭರಮಗೌಡ್ರ- ಬದುಕು ಬೇಸಾಯ’ ಕೃತಿಗೆ ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ  ‘ಇನ್ಫೋಸಿಸ್ ಫೌಂಡೇಷನ್’ ಪ್ರಶಸ್ತಿ’ಗೆ ಭಾಜನರಾಗಿದ್ಧಾರೆ. 

ವಿ. ಗಾಯತ್ರಿ