About the Author

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದಬ್ಬೆಯಲ್ಲಿ 1952ರ ಜೂನ್ 3ರಂದು ಜನಿಸಿದ ವಿಜಯಾ ಅವರು ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಲವಾರು ವರ್ಷ ಪ್ರಾಧ್ಯಾಪಕರಾಗಿದ್ದರು. ಉತ್ತಮ ಲೇಖಕಿ. ಮೊದಲ ಸ್ತ್ರೀವಾದಿ ವಿಮರ್ಶಕಿ ಎಂದು ಅವರನ್ನು ಗುರುತಿಸಲಾಗುತ್ತದೆ.

ಇರುತ್ತವೆ (1975), ನೀರುಲೋಹದ ಚಿಂತೆ (1985), ತಿರುಗಿ ನಿಂತ ಪ್ರಶ್ನೆ (19995), ಇತಿಗೀತಿಕೆ (ಸಮಗ್ರ 1999) ಕವನ ಸಂಕಲನಗಳು.

ಉರಿಯ ಚಿಗುರು ಉತ್ಕಲೆ (1998) ಅವರ ಪ್ರವಾಸ ಸಾಹಿತ್ಯ ಕೃತಿ; ನಯಸೇನ (1977), ನಾಗಚಂದ್ರ ಒಂದು ಅಧ್ಯಯನ (1983), ಹಿತೈಷಿಣಿಯ ಹೆಜ್ಜೆಗಳು (1992), ಸಾರಸರಸ್ವತಿ (1996) ಶ್ಯಾಮಲಾ ಸಂಚಯ (1989) ಅನುಪಮಾ ನಿರಂಜನ (1998) ಸಂಶೋಧನಾ ಮತ್ತು ಸಂಪಾದಿತ ಕೃತಿಗಳು.

ಮಹಿಳೆ, ಸಾಹಿತ್ಯ ಸಮಾಜ (1989), ನಾರಿದಾರಿ ದಿಗಂತ (1997), ಮಹಿಳೆ ಮತ್ತು ಮಾನವತೆ (2003) ಮುಖ್ಯ ವಿಮರ್ಶಾ ಸಂಕಲನಗಳು,

ಮೇರಿ ಮೆಕ್‌ಲಿಯಾಡ್ ಬೆಥನ್ (1979), ವಿಮೋಚನೆಯೆಡೆಗೆ (1986), ಗುರುಜಾಡ ಅನುವಾದಿತ ಕೃತಿಗಳು.

ನೆದರ್‌ಲ್ಯಾಂಡ್ಸ್, ಬೆಲ್ಸಿಯಂ, ಜರ್ಮನಿ ಮತ್ತು ಇಂಗ್ಲೆಂಡ್ ದೇಶಗಳ ಪ್ರವಾಸ.

ವರ್ಧಮಾನ ಉದಯೋನ್ಮುಖ ಲೇಖಕಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಬಹುಮಾನ, ಅನುಪಮಾ ಪ್ರಶಸ್ತಿ ಸೇರಿದಂತೆ ಹಲವು ಗೌರವ, ಪುರಸ್ಕಾರಗಳು ಸಂದಿವೆ.

ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದರು. 2018ರ ಫೆಬ್ರುವರಿ 23ರಂದು ನಿಧನರಾದರು.

ವಿಜಯಾ ದಬ್ಬೆ

(03 Jun 1952-23 Feb 2018)