About the Author

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಇತ್ಯಾದಿ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದರೆ ಇವರ ಸುಮಾರು ೫೦೦೦ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕನ್ನಡ ಪ್ರಭಾ, ಟೈಮ್ಸ್ ಆಫ್ ಇಂಡಿಯಾ ಮುಂತಾದ ಪತ್ರಿಕೆಗಳಲ್ಲಿ ಅಂಕಣಗಳು ಪ್ರಕಟವಾಗಿದೆ. ನಲವತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ ಶ್ರೀ ವೈ.ಜಿ. ಮುರಳೀಧರನ್ ಅವರ ಪುಸ್ತಕಗಳು: ಲೇಖನ ಬರವಣಿಗೆಯನ್ನು ವೃದ್ಧಿಪಡಿಸಿಕೊಳ್ಳುವುದು ಹೇಗೆ ಯಶಸ್ವಿ ಜೀವನಕ್ಕೆ ನೀಲಿ ನಕ್ಷೆ ಸರ್ದಾರ್ ವಲ್ಲಭಾಯ್ ಪಟೇಲ್ ಸುಭಾಷ್ ಚಂದ್ರ ಬೋಸ್ ನೆಲ್ಸನ್ ಮಂಡೇಲಾ ಮಾರ್ಟಿನ್ ಲೂಥೆರ್ ಕಿಂಗ್ ಜೂನಿಯರ್ ಭಾರತದ ಸಂವಿದಾನ [ಅಚ್ಚಿನಲ್ಲಿ] ಆಡಳಿತದಲ್ಲಿ ನೈತಿಕತೆ [ಅಚ್ಚಿನಲ್ಲಿ] ಪೊಲೀಸ್ ಮತ್ತು ನೀವು [ಅನುವಾದ] ಮಹಿಳಾ ಕೈದಿಗಳ ಹಕ್ಕುಗಳು [ಅನುವಾದ] [ಅಚ್ಚಿನಲ್ಲಿ] Corruption the Rot within Managing the Supply side of information Lokpal - the law in the making Sakala The Right to Information Medical Negligence and Consumers Consumer Protection Banking and Consumers

ಗ್ರಾಹಕ ಜಾಗೃತಿಯಲ್ಲಿ ಮೊದಲು ಕೇಳಿಬರುವ ಹೆಸರು ವೈ.ಜಿ.ಮುರಳೀಧರ ಅವರದ್ದು.ಅವರು ಸುಮಾರು ಇಪ್ಪತ್ತು ವರ್ಷಗಳಿಂದ ಗ್ರಾಹಕ ಜಾಗೃತಿ ಮತ್ತು ಮಾಹಿತಿ ಹಕ್ಕು ಆಂದೋಲನದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಸಾಧನೆಗೆ ಪತ್ರಿಕಾ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಂಗ್ಲಿಷ್ ಕನ್ನಡದಲ್ಲಿ ಗ್ರಾಹಕ ಜಾಗೃತಿ, ಮಾಹಿತಿ ಹಕ್ಕು, ಉತ್ತಮ ಆಡಳಿತ, ಲೋಕಪಾಲ್ ಇತ್ಯಾದಿ ವಿಚಾರಗಳ ಮೇಲೆ  ಅನೇಕ ಲೇಖನಗಳು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಈವರೆಗೂ ಸುಮಾರು 30 ಪುಸ್ತಕಗಳು ಹಾಗೂ 3000ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಸದ್ಯ ಉದಯವಾಣಿಯಲ್ಲಿ ಅರ್ಥಹಿತ' ಎಂಬ ಅವರ ಅಂಕಣ ಪ್ರಕಟವಾಗುತ್ತಿದೆ. ಇದಲ್ಲದೆ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ದಿ ಹಿಂದೂ ಪತ್ರಿಕೆಗಳಲ್ಲೂ ಅನೇಕ ಲೇಖನಗಳನ್ನು ಬರೆದಿದ್ದಾರೆ. ಗ್ರಾಹಕ ಜಾಗೃತಿಯ ಜೊತೆಗೆ ಶ್ರೀ ಮುರಳೀಧರ ಅವರು ಮಾಹಿತಿ ಹಕ್ಕಿನ ಬಗ್ಗೆ ಗಮನ ಹರಿಸಿದ್ದಾರೆ. ನಾಗರೀಕರಲ್ಲಿ ಜಾಗೃತಿ ಉಂಟುಮಾಡುವುದಲ್ಲದೆ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡುವುದರಲ್ಲೂ ನಿರತರಾಗಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳಾದ ಆಡಳಿತ ತರಬೇತಿ ಸಂಸ್ಥೆ (ಮೈಸೂರು), ಸೆಂಟರ್ ಫಾರ್ ಗುಡ್ ಗವರ್‌ನೆನ್ಸ್ (ಹೈದರಾಬಾದ್), ಕಾಮನ್‌ವೆಲ್ತ್ ಕ್ರೂಮನ್‌ರೈಟ್ಸ್ ಇನಿಷಿಯೇಟೀವ್ (ನವದೆಹಲಿ) ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಮುರಳೀಧರ ಅವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಪರಿಗಣಿಸಿವೆ. ಬೆಂಗಳೂರಿನಲ್ಲಿ ಕ್ರಿಯೆಟ್ (CREAT) ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಚಟುವಟಿಕೆಗಳಲ್ಲಿ ನಿರತರಾಗಿರುವ ಶ್ರೀಯುತರು ತಮ್ಮ ಮಗ, ಮಡದಿ ಮತ್ತು ತಾಯಿಯೊಂದಿಗೆ ವಾಸವಾಗಿದ್ದಾರೆ.

ವೈ.ಜಿ.ಮುರಳೀಧರನ್

(16 Aug 1956)